H.H. Shri Swamiji @ Bhakti TV Koti Deepotsavam - Vijayawadaಆಂಧ್ರಪ್ರದೇಶದ ಸಾಂಸ್ಕೃತಿಕ ನಗರಿ ವಿಜಯವಾಡದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿತ ವಾಗಿರುವ ಕೋಟಿ ದೀಪೋತ್ಸವ ಕಾರ್ಯಕ್ರಮಕ್ಕೆ ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ೧೦೦೮ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಈ ಆಹ್ವಾನವನ್ನು ಮನ್ನಿಸಿ ಪೂಜ್ಯ ಶ್ರೀಪಾದಂಗಳವರು ವಿಜಯವಾಡ ನಗರಿಗೆ ದಿಗ್ವಿಜಯ ಮಾಡಿ ಕೋಟಿದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಮ್ಮ ದೇಶದ ಉಪರಾಷ್ಟ್ರಪತಿಗಳಾದ ಸನ್ಮಾನ್ಯ ಶ್ರೀ ವೆಂಕಯ್ಯ ನಾಯುಡುರವರು ಹಾಗೂ ಆಂಧ್ರಪ್ರದೇಶದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಚಂದ್ರಬಾಬು ನಾಯುಡುರವರು ಮತ್ತಿತರ ಗಣ್ಯರು ಕೂಡ ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿದ್ದರು. ಪರಮಪೂಜ್ಯ ಶ್ರೀಪಾದಂಗಳವರ ಅನುಗ್ರಹ ಸಂದೇಶ ಕಾರ್ಯಕ್ರಮಾನಂತರದಲ್ಲಿ ಎಲ್ಲ ಗಣ್ಯರು ಹಾಗೂ ಭಕ್ತಾದಿಗಳು ಪೂಜ್ಯ ಶ್ರೀಪಾದರ ಆಶೀರ್ವಾದ ಪಡೆದರು.

How to Share With Just Friends

How to share with just friends.

Posted by Facebook on Friday, December 5, 2014