Shri Narahari Teerthara Aradhana and Shri Gopala Dasara Poorvaradana celebrationsAradhana MahOtsava of Shri Narahari Teertharu and Poorvaradhana of Sri Gopaladasaru was held in a grand manner at Shri Kshetra Mantralayam. Morning H H Shri Swamiji performed special puja's to Shri MoolaRamadEvaru and Shri Vijayavittala dEvaru ( The idol was worshiped by Shri Gopaladasaru). Evening Dasa sahitya discourses were organized at Pravachana mantapam, after the anugraha sandEsha of H H Shri Swamiji , a big procession was organized at temple prakaram. H H Shri Swamiji presided the Rathatotsavam with The Tamboora of Shri Gopaladasarayaru. Mantralayam dasa sahitya project bhajana mandali's and several devotees were involved in this holy event and got blessed by Shri Swamiji. ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಶ್ರೀ ನರಹರಿ ತೀರ್ಥರ ಆರಾಧನಾ ಹಾಗೂ ರಾಯರ ಪರಮ ಭಕ್ತರಾದ ಹರಿದಾಸ ಚತುಷ್ಟಯರಲ್ಲಿ ತೃತೀಯರಾದ ಶ್ರೀ ಗೋಪಾಲದಾಸರ ಆರಾಧನಾ ಮಹೋತ್ಸವ ಅತಿ ವೈಭವದಿಂದ ನೆರವೇರಿತು. ಪ್ರಾತಃಕಾಲ ಶ್ರೀಮನ್ಮೂಲರಾಮಚ೦ದ್ರ ದೇವರ ಸಂಸ್ಥಾನ ಪೂಜೆ ಹಾಗೂ ಶ್ರೀ ವಿಜಯವಿಠಲ ದೇವರ ಪೂಜೆಯು ಜರುಗಿತು . ಸಾಯಂಕಾಲ ವಿದ್ವಾಂಸರಿಂದ ಪ್ರವಚನ ಹಾಗೂ ಗುರುವರ್ಯರಿಂದ ಅನುಗ್ರಹ ಸಂದೇಶ ನಂತರದಲ್ಲಿ ಸುವರ್ಣರಥದಲ್ಲಿ ವಿಜಯವಿಠಲದೇವರ-ರಾಯರ-ಹಾಗೂ ಗೋಪಾಲದಾಸರ ವರ್ಣಚಿತ್ರದ ಮೆರವಣಿಗೆ ಅತಿ ವೈಭವದಿಂದ ಜರುಗಿತು. ಪರಮಪೂಜ್ಯ ಶ್ರೀಶ್ರೀಪಾದಂಗಳವರು ದಾಸರಾಯರ ತಂಬೂರಿಯನ್ನು ಧರಿಸಿ ಉತ್ಸವದ ಅಧ್ವರ್ಯ ವಹಿಸಿದ್ದು ಅವಿಸ್ಮರಣೀಯವಾಗಿತ್ತು . ಶ್ರೀಮಠದ ದಾಸಸಾಹಿತ್ಯ ಪ್ರಾಜೆಕ್ಟ್ ನ ಭಜನಾ ಮಂಡಳಿಗಳು ಹಾಗೂ ಅನೇಕ ಗಣ್ಯರು ಹಾಗು ಭಕ್ತರು ಉತ್ಸವದಲ್ಲಿ ಭಾಗವಹಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.