Sri Sushilendra Teertharuಸುಮಾರು ನೂರಾ ಎಂಟು ವರ್ಷಗಳ ಹಿಂದಿನ ಮಾತು... ಮಂತ್ರಾಲಯ ಕ್ಷೇತ್ರಕ್ಕೆ ಹತ್ತಿರದಲ್ಲಿರುವ ತುಂಗಭದ್ರೆಯ ತೀರದ ಮೇಲಿನ ಒಂದು ಕಾಡು ಕುಗ್ರಾಮ 'ರಾಮಪುರ' ಅಂತಹ ಅತೀ ಅನಾನುಕೂಲತೆಯ ಪ್ರದೇಶದಲ್ಲಿ ಅಲ್ಲಿನ ಗ್ರಾಮಸ್ಥರು ಹಾಗೂ ಶಿಷ್ಯರ ಸಹಾಯದಿಂದ ಪರಮಪೂಜ್ಯ ಶ್ರೀ ಸುಕೃತಿಂದ್ರ ತೀರ್ಥ ಶ್ರೀಪಾದರ ಅನುಗ್ರಹ ಬಲದಿಂದ ಅತ್ಯಂತ ದೊಡ್ಡ ವಿದ್ವತ್ಸಭೆ ನಡೆಯಿತು. ಎಂತಹ ಸಭೆಯೆಂದರೆ ಸಭಾದಿನದಲ್ಲಿ ಪ್ರತಿನಿತ್ಯ ಒಟ್ಟಿಗೆ ಆರುಸಾವಿರ ಬ್ರಾಹ್ಮಣರಿಗೆ ಪಂಚಭಕ್ಷ್ಯಸಹಿತವಾದ ಮೃಷ್ಟಾನ್ನ ಭೋಜನ -ವಿದ್ವಾಂಸರಿಗೆ ಸಂಭಾವನೆ-ವಿದ್ಯಾರ್ಥಿಗಳಿಗೆ ಅವರ ಅಧ್ಯಯನದ ಅಳತೆಗನುವಾಗಿ ಪಾರಿತೋಷಕ - ಇತರರಿಗೆ ಭೂರಿ ದಕ್ಷಿಣೆ !!!! ಸೀಮೆಯ ಜನರೆಲ್ಲಾ ನಿಬ್ಬೆರಗಾಗಿ ಅಸಭೆಯನ್ನು ಆಯೋಜಿಸಿದ ಶ್ರೀಮಠದ ಪ್ರತಿನಿಧಿಗಳನ್ನು ಒಮ್ಮೆಯಾದರೂ ನೋಡೋಣವೆಂದು ಬರುವರಂತೆ.
ಇಂತಹ ಅಘಟನಾಘಟನ ಕತೃತ್ವಶಾಲಿಯೇ "ರಾಜಾ ಕೃಷ್ಣಾಚಾರ್ಯರು" ಬಹು ತೀಕ್ಷ್ಣ ಮತಿಗಳು ,ಉದಾರಿಗಳು.

ಇವರು ರಾಯರ ಪ್ರೀತ್ಯಾಸ್ಪದರಾದ ಶ್ರೀ ಸುಜ್ಞಾನೇಂದ್ರ ತೀರ್ಥ ಶ್ರೀಪಾದಂಗಳವರ ಪೌತ್ರರಾದ ವೇದಮೂರ್ತಿ ರಾಘವೇಂದ್ರಾಚಾರ್ಯರ ದ್ವಿತೀಯ ಪುತ್ರರು.
ಜ್ಯೇಷ್ಠ ಭ್ರಾತೃಗಳಾದ ರಾಜಾ ವೇಣುಗೋಪಾಲಾಚಾರ್ಯರು ಸುಕೃತೀಂದ್ರ ತೀರ್ಥ ಶ್ರೀಪಾದರೆಂಬ ಅಭಿದಾನದಿಂದ ಶ್ರೀಮದಾಚಾರ್ಯರ ಸತ್ಪರಂಪರೆಯಲ್ಲಿ ವಿರಾಜಮಾನರಾಗಿದ್ದರು. ಪರಿಧಾವಿ ಸಂವತ್ಸರದ ಅಶ್ವಯುಜ ಶುಕ್ಲ ದಿನದಂದು ರಾಜಾ ಕೃಷ್ಣಾಚಾರ್ಯರಿಗೆ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕವಾಗಿ ಶ್ರೀ ಸುಶೀಲೇಂದ್ರ ತೀರ್ಥ ಶ್ರೀಪಾದರೆಂಬ ದಿವ್ಯಾಭಿದಾನದಿಂದ ವಿರಾಜಮಾನರಾದರು.

ಆಶ್ರಮವಾದ ಕೂಡಲೇ ಶ್ರೀಯವರು ಗಜ-ತುರಂಗ-ಅಂದೋಳಿಕಾ ಬಿರುದಾವಳಿಗಳಿಂದಲೂ ಮಹೀಶೂರಿನ ರಾಜರಬಾರಿನ ಶಿಫಾಯಿಜನ - ಅಂಗರಕ್ಷಕರು - ಪರಿಚಾರಕ ವರ್ಗದೊಡಗೂಡಿ ಮಂತ್ರಾಲಯ ಕ್ಷೇತ್ರಕ್ಕೆ ಧಾವಿಸಿಬಂದರು. ಶ್ರೀರಾಯರ ಸನ್ನಿಧಿಯಲ್ಲಿಯೇ ವಾಸ್ತವ್ಯಹೂಡಿ ಶ್ರೀರಾಯರಿಗೆ ಉತ್ಸವ ವಿಗ್ರಹ , ರಜತ ಗಜ-ತುರಗ ವಾದೀಂದ್ರರ ಮುಖ್ಯಮಂಟಪ ಮುಂತಾದ ದೊಡ್ಡ ಕೆಲಸಗಳು ಪೂರೈಸಿದವು. ಸಂಸ್ಕೃತ ವಿದ್ಯಾಪೀಠ ಹಾಗೂ ವರ್ಷಕ್ಕೆರಡುಬಾರಿ ಶ್ರೀ ಸಮೀರಸಮಯಸಂವರ್ಧಿನಿ ಸಭೆಯು ಕೂಡ ಆರಂಭವಾಗಿ ವಿದ್ವಾಂಸರ ಮನ್ನಣೆ ವಿಶೇಷವಾಗಿ ಜರುಗತೊಡಗಿತು. ಶ್ರೀಯವರು ನಂತರದಲ್ಲಿ ಕೊಪ್ಪಳ ರಿತ್ತಿ ಹರಿಹರ ಮಾರ್ಗವಾಗಿ ಗರಳಪುರಿ ಪ್ರವೇಶ ಮಾಡಿ ಅದ್ವಿತೀಯ ಸಭಾಕಾರ್ಯಕ್ರಮವನ್ನು ನಡೆಸಿ ಅಲ್ಲಿಯೇ ಶ್ರೀಮನ್ಮೂಲರಘುಪತಿ ವೇದವ್ಯಾಸದೇವರ ಮಹಾಭಿಷೇಕವನ್ನ ನಡೆಸಿ ನಂತರದಲ್ಲಿ ಅಲ್ಲಿಂದ ರಾಯಚೂರು ಗದ್ವಾಲಿ ಪ್ರಾಂತ್ಯ ಯಲಬುರ್ಗಾ ಬಾಗಿಲುಕೋಟೆ ಸೀಮೆಗಳಲ್ಲಿ ಸಂಚರಿಸಿ ದಕ್ಷಿಣದೇಶ ಯಾತ್ರೆ ಆರಂಭಿಸಿದರು.

ಅನ್ನದಾನ ಶಾಮಿ :
ಶ್ರೀಯವರು ಹೋದ ಪ್ರತಿ ಕ್ಷೇತ್ರದಲ್ಲಿ ಸಭೆ ಸಂತರ್ಪಣೆ ಪ್ರತಿ ನಿತ್ಯವೂ ನಡೆಯಬೇಕು. ಒಮ್ಮೆ ಪೂರ್ವಿಕಗುರುಗಳ ದಿವ್ಯಸನ್ನಿಧಾನವುಳ್ಳ ಶ್ರೀರಂಗಂ ಕ್ಷೇತ್ರಕ್ಕೆ ಸಂಸ್ಥಾನವು ಚಿತ್ತೈಸಿತು. ಅಲ್ಲಿ ಸುಮಾರು ಹದಿನೆಂಟು ದಿನಗಳ ಕಾಲ ಅಲ್ಲಿರುವ ಪ್ರಸಂಗ ಆಗ ಅಲ್ಲಿ ಪುಷ್ಯಮಾಸದ "ರಪಟ್ಟು" ಪಗಳುಪತ್ತೆಂಜು ಉತ್ಸವ , ಉತ್ಸವಕ್ಕಾಗಿ ಸಾವಿರಾರು ಜನ ಶ್ರೀಕ್ಷೇತ್ರಕ್ಕೆ ಬರುವವರು ಪ್ರತಿನಿತ್ಯವೂ ಸುಮಾರು ಸಾವಿರಾರು ಜನರಿಗೆ ಸರಿಯಾಗಿ ಹನ್ನೊಂದು ಘಂಟೆಗೆ ಮೃಷ್ಟಾನ್ನ ಭೋಜನ ದಕ್ಷಿಣಾತ್ಯರಿಗೆ ಪ್ರಿಯವಾದ ಭೋಜ್ಯಪದಾರ್ಥ ಗಳನ್ನ ಮಾಡಿಸಿ ವೈಶ್ವಾನರಭಿನ್ನ ರಂಗ ಮೂಲರಾಮನನ್ನ ನಿತ್ಯವೂ ಅರ್ಚಿಸುವರಂತೆ... ಸಂಸ್ಥಾನನದಲ್ಲಿ ಉಂಡ ಪ್ರತಿಯೊಬ್ಬರೂ ಶ್ರೀಪಾದರನ್ನ " ಅನ್ನದಾನ ಶಾಮಿ " ಎಂದು ಹೊಗಳುತ್ತಿದರಂತೆ. ಇಂತಹ ಅನಿಯಂತ್ರಿತ ಖರ್ಚು ಇದ್ದಾಗ್ಯೂ ಶ್ರೀಮನ್ಮೂಲರಾಮ ದಿಗ್ವಿಜಯರಾಮ ಜಯರಾಮದೇವರಿಗೆ ಭವ್ಯವಾದ ಸುವರ್ಣಮಂಟಪವನ್ನು ಮಾಡಿಸಿ ಕುಳ್ಳಿರಿಸಿ ಪೂಜಿಸಿ ಧನ್ಯರಾದರು ಶ್ರೀಯವರು. ಆಗಿನಕಾಲದಲ್ಲಿ ತಾವು ಆಶ್ರಮ ಸ್ವೀಕರಿಸಿದ ನಂತರ ಶ್ರೀಮಠದ ಖರ್ಚನ್ನು ಕಳೆದು ಸುಮಾರು ಹನ್ನೆರಡು ಲಕ್ಷ ದ್ರವ್ಯವನ್ನು ಶ್ರೀರಾಘವೇಂದ್ರ ಸ್ವಾಮಿಗಳಿಗೆ ಪಾದಕಾಣಿಕೆ ಎಂದು ಸಮರ್ಪಿಸಿದರಂತೆ "

ಶ್ರೀಗಳವರ ಗೋಸೇವೆ : ಸಂಸ್ಥಾನದಲ್ಲಿ ಗೋಸಂಪತ್ತು ವಿಪುಲವಾಗಿತ್ತು. ಸಂಸ್ಥಾನದ ಜೊತೆಗೆ ಗೋವುಗಳು ಕೂಡ ಸಾಗಿಬರಬೇಕಾದ ಪದ್ಧತಿ ಆಗ. ಶ್ರೀಯವರು ಒಮ್ಮೆ ಹೊಸಪೇಟೆಯನ್ನು ಸೇರುವ ಹೊತ್ತಿಗೆ ತುಂಗಭದ್ರೆಯಲ್ಲಿ ಪೂರ್ಣ ಪ್ರವಾಹ ಬಂದುದ್ದರಿಂದ ಗೋವುಗಳು ನದಿಯ್ ಆಕೆಯ ದಡದಲ್ಲಿಯೇ ಉಳಿಯಬೇಕಾಯಿತು. ಶ್ರೀಗಳವರು ಇದಕ್ಕಾಗಿಯೇ ಹೊಸಪೇಟೆಯಲ್ಲಿ ನಾಲ್ಕಾರು ದಿನಗಳನ್ನು ಕಳೆದರು ಪ್ರವಾಹ ತಗ್ಗಲಿಲ್ಲ -ಗೋವುಗಳುಈಚೆ ಬರಲಿಲ್ಲ. ಕೊನೆಗೆ ಆ ಕಾಲದಲ್ಲಿ ರೈಲಿನ ವ್ಯಾಗನ್ಗಳ ದ್ವಾರಾ ಹಸುಗಳನ್ನು ತರಿಸಿಕೊಂಡರಂತೆ. ರೈಲು ಪ್ರಯಾಣವೇ ಅತಿ ದುಸ್ತರವಿದ್ದ ದಿನಗಳಲ್ಲಿ ಶ್ರೀಮಠದ ಗೋವುಗಳಿಗೆ ಸ್ವಾಮಿಗಳು ಇತ್ತ ಮಾನ್ಯತೆಯಾದರು ಎಂಥದೆಂದು ಊಹಿಸುವ ವಿಚಾರ ವಾಚಕರಿಗೆ ಬಿಟ್ಟದ್ದು.

ಶ್ರೀಯವರ ಉಡುಪಿ ದಿಗ್ವಿಜಯವು ಎಲ್ಲರಿಗೂ ಈಗಾಗಲೇ ವಿದಿತವಾಗಿದ್ದುದರಿಂದ ಸಂಕ್ಷೇಪಿಸಿರುತ್ತೇವೆ ಶ್ರೀ ಕೃಷ್ಣಸನ್ನಿಧಿಗೆ ಇಪ್ಪತ್ತು ಸಾವಿರದಷ್ಟು ದ್ರವ್ಯವನ್ನು ಸಮರ್ಪಿಸಿ ವರದಾ ತೀರಸ್ಥ ರಿತ್ತಿ ಕ್ಷೇತ್ರಕ್ಕೆ ದಿಗ್ವಿಜಯಮಾಡಿ ರಿತ್ತಿರಾಯರೆಂದೇ ಖ್ಯಾತರಾದ ಶ್ರೀಧೀರೆಂದ್ರ ತೀರ್ಥ ಗುರುಸಾರ್ವಭೌಮರ ಸನ್ನಿಧಿಯಲ್ಲಿ ಶ್ರೀ ಸುವೃತೀಂದ್ರ ತೀರ್ಥರಿಗೆ ಸಂಸ್ಥಾನವನ್ನು ಒಪ್ಪಿಸಿ ಅಕ್ಷಯ ಸಂವತ್ಸರದ ಆಷಾಢ ಶುಕ್ಲ ತೃತೀಯ ಮೂಲರಾಮನ ಧ್ಯಾನಪರರಾದರು. ಶ್ರೀಯವರ ಶಿಷ್ಯರಲ್ಲದೇ ನೂರಾರು ಜನ ಪರಮತೀಯ ಪರಮಠೀಯ ಪಂಡಿತ ಪಾಮರರು ಶ್ರೀಯವರ ಬೃಂದಾವನ ಪ್ರವೇಶವಾರ್ತೆಯನ್ನ ಕೇಳಿ ಇನ್ನಿಲ್ಲದಂತೆ ದುಃಖಿತರಾದರಂತೆ. ಇಂದಿಗೂ ಯಾರಾದರೂ ಜೀವನದಲ್ಲಿ ನಿರುತ್ಸಾಹಿಗಳಾಗಿ ಜಿಗುಪ್ಸಿತ ಜೀವನ ನಡೆಸುವವರು ಪ್ರತಿನಿತ್ಯ ಪ್ರಾತಃಕಾಲದಲ್ಲಿ ಶ್ರೀಸುಶೀಲೇಂದ್ರ ತೀರ್ಥರ ಸ್ಮರಣೆ ಮಾಡಿದಲ್ಲಿ ಸಕಲ ವಿಧವಾಗಿ ಉನ್ನತಿಯನ್ನು ಹೊಂದುವವರು ಎಂದು ಕವಿವರ್ಯ ಮಾನವಿ ಗುಂಡಾಚಾರ್ಯರು ( ಶ್ಯಾಮಸುಂದರದಾಸರು) ಹ್ರದಯತುಂಬಿ ಸ್ತೋತ್ರ ಮಾಡಿರುವರು. ಇಂತಹ ಮಹಾನುಭಾವರ ದಿವ್ಯ ಚರಿತ್ರೆ ಅವರ ಆರಾಧನಪರ್ವದಿನದಂದು ಶ್ರೀ ಸುಬುದ್ಹೇಂದ್ರ ತೀರ್ಥ ಗುರುಗಳ ಅಂತರ್ಯಾಮಿಯಾದ ಶ್ರೀ ಮೂಲರಾಮನ ಚರಣಗಳಿಗೆ ಸಮರ್ಪಿತವಾಗಿದೆ. ಶ್ರೀ ಕೃಷ್ಣಾರ್ಪಣಮಸ್ತು

Around 108 years ago, in a very remote and backward village called Rampura near to Mantralaya on the banks of the river Tungabhadra, with the help of the locals and the disciples of the Matha and with the blessings of Sri Sri Sukruthendra Theertharu a very big Vidwat Sabha was organized. The sabha was so big that daily around 6000 people were participating and they were served with pancha-baksha-mrushtanna food delight. Every scholar was rewarded according to his knowledge, every student was rewarded according to his merit and other participants were handsomely rewarded with dakshina. All these were organized by a very devout person Raja Krishnacharya.

Raja Krishnacharya was the second son of Vedamurthy Raghavendracharya who was the grandson of Sri Sri Sugnanendra Theertharu in his poorvashrama.

Elder brother Raja Venugopalacharyaru took the sanyashrama and became known as Sri Sri Sukruthendra theertharu. In the year of Paridhavi samvatsara, Ashwayuja maasa, Sukla paksha Raja Krishnacharya was given the sanyashrama and was named Sri Sri Susheelendra theertharu.

After taking the ashrama, Swamiji proceeded towards Mantralaya along with the parivara and then started taking steps towards development of the matha. He initiated newer tasks like new Utsava moorthi, silver elephant, new mantapa for Sri Vadeendra theertharu and completed them within quick time.

He also started the Samskrutha Vidyapeeta and the started Sri Sameerasamayasamvardhini sabha twice every year to focus on promotion of madhwa philosophy. he then undertook digvijaya of the places like Koppala, Ritti, Harihara, Garalapuri. At Garalapuri he organized big sabha and also performed Sriman moola rama devara pooja, maha-abhisheka and then proceeded towards Raichur, Gadwal, yelaburga, Bagalakote and then started his southern digvijaya.

Every place and every day where Swamiji went a big sabha and santarpane was mandatory. Once when in Srirangam for digvijaya, for 18 days the swamiji stayed in Srirangam and every day there was utsavas held. Every day thousands of devotees were coming, everyone was offerred the prasada of Sriranga, Sri moola rama and were fed with mrushtanna bhojana at 11 am. This made people call the swamiji as "annadana shami". Inspite of such spends, swamiji got a new golden mantapa for the pooja of Sri Moola Rama, Sri Digvijaya Rama and Sri Jayarama devaru and also offerred roughly 12 lakhs of rupees towards Sri raghavendra swamy paada kanike.

During those days, the cows of the Samsthana were also travelling along with the swamiji. Once during the travel when they reached Hosapete, the river was in spate and it was difficult for the cows to cross the river due to the current. Swamiji waited for 4 days for the river levels to subside, but it did not happen. Swamiji then used the services of the railway and transported all the cows via goods train. Such was his care towards the cows

The digvijaya to udupi kshetra was a very important one. Swamiji donated around 20 thousand in those days and then proceeded to the banks of Varada river. He went to the town of Ritti which is famous for the presence of Ritti-Raja, Sri Sri Dhirendra Theertharu. He stayed there in this place and gave the baton of the Samsthana to Sri Sri Suvruteendra Theertharu and went to the lotus feet of Sriman Ramadevaru in the Akshaya Samvatsara Aashada maasa Shukla paksha tritheeya day. Hundreds of scholars from all matha expressed their sorrow about the news of the swamiji entering the brundavana state. Even today, if someone is very down and low, if those people in their morning think of Sri Susheelendra theertharu those people will get the benefits of success. this is recorded by Manavi Gundacharya (Shyamasundara dasaru) in a stanza. The article written on the eve of swamijis aaradhana is offerred to Sri Sri Subudhendra Theertharu and through him to Sriman Moola Ramadevaru.

Sri Krishnarpanamastu.

Article Courtesy : Sri Ramakanth Manvi, Mantralayam
Translation service :Sri Prasanna BR, Bangalore