ಗುರುರಾಜರ ಸೇವೆಯೇ ಭಾಗ್ಯ

Purusha Sukta – 10
October 20, 2020
ಪ್ರಾಣೇಶದಾಸರಾಯರು – ಭಾಗ ೧
October 23, 2020

ಗುರುರಾಜರ ಸೇವೆಯೇ ಭಾಗ್ಯ

“ಎಷ್ಟು ಪೇಳಲಿ ಇವರ ನಿಷ್ಠೆ ಮಹಾತ್ಮೆಯನು, 
ದುಷ್ಟರಿಗೆ ದೊರಯದಿವರಾ ಸೇವಾ ಭಾವ” ಎಂದು ಗುರುಶ್ರೀಶವಿಠಲರು ಹೇಳಿದ ಹಾಗೇ, ರಾಯರ ಸೇವೆ ಎಲ್ಲರಗು ದೊರೆಯುವಂತಹದಲ್ಲ. ಅವರ ಸೇವೆ ದೊರೆಕಿದೆ ಅಂದರೇ ನಮ್ಮ ಪೂರ್ವ ಜನ್ಮದ ಫಲ ಎಂದರೆ ತಪ್ಪಾಗಲಾರದು. 

“ಸಾರಿದವರಘ ತರಿದು ಸುಖಫಲ
ಸರಿ ಕೊಡುತಲಿ ಸರ್ವಕಾಲದಿ
ಧಾರುಣೀ ತಳದಲ್ಲಿ ಈಪರಿ ಮೆರೆದ ಗುರುರಾಯ”
ಎಂದು ಗುರುಜಗನ್ನಾಥ ದಾಸರು ಹೇಳಿದ ಹಾಗೇ ರಾಯರ ಸೇವೆ ಮಾಡಿದವರ ಕಷ್ಟಗಳನ್ನು ದೂರಮಾಡಿ, ಸರ್ವ ಕಾಲಕ್ಕೂ ಸುಖವನ್ನು ಕೊಡುತ್ತಾ ಈ ಭೂಮಿಯ ಮೇಲೆ ನೆಲಿಸಿದ್ದಾರೆ. ನಮ್ಮನು ಸಲಹುವುದಕ್ಕೇ ನಿಂತ ಗುರುಗಳನ್ನು ಸೇವಿಸದಿದ್ದರೆ ನಮ್ಮ ಜೀವನವೇ ವ್ಯರ್ಥ. 
“ಮಂದ ಭಾಗ್ಯರಿಗೆ ದೊರೆಯದೀವರ ಸೇವಾ, 
ಶರಣರ ಸಂಜೀವ ” ಎಂದು ಶ್ರೀಧವಿಠಲರು ಹೇಳಿದ ಹಾಗೇ ರಾಯರ ಸ್ಮರಣೆ ಹಾಗು
ಸೇವೆ ಅಲ್ಪ ಭಾಗ್ಯರಿಗೆ ದೊರೆಯುವಂತಹದಲ್ಲ, ನಮ್ಮ ಸೌಭಾಗ್ಯ ರಾಯರ ಸ್ಮರಣೆ ಮಾಡೋ ಅವಕಾಶ ದೊರೆಕಿದೆ.

“ಗುರುವೇ ನೀ ಕರುಣಿಸದಿರಲು ಉದ್ಧರಿಸುವ, 
ದೊರೆಗಳು ಧರೆಯೊಲುಂಟೆ” ಎಂದು ಅಭಿನವ ಜನಾರ್ಧನ ವಿಠಲರು ಕೇಳಿಕೊಂಡ ಹಾಗೇ, ನಾವು ಕೂಡಾ ರಾಯರಲ್ಲಿ, ಶ್ರದ್ಧೆಯಿಂದ ಅವರ ಸೇವೆ ಮಾಡಿ, ಗುರುಗಳೇ ನೀವು ಕರುಣಿಸದಿದ್ದರೆ ನಮಗೆ ಬೇರೆ ಯಾರು ಕರುಣಿಸುವರು ಎಂದು ಕೇಳಿಕೊಂಡರೆ ರಾಯರು ನಮ್ಮನ್ನು ಉದ್ಧರಿಸುವುದರಲ್ಲಿ ಸಂಶಯವೇ ಇಲ್ಲ. ಬೇಡಿದವರಿಗೆ ಸಕಲವನ್ನೂ ಕೊಡುವ ನಮ್ಮ ರಾಯರು ನಮಗೋಸ್ಕರವೇ ಬಂದು ನೆಲಿಸಿದ್ದಾರೆ. ಇಂತಹ ರಾಯರಲ್ಲಿ ಭಕ್ತಿಯಿಂದ ಪೂಜಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
ಪವಿತ್ರವಾದ ನವರಾತ್ರಿ ಹಬ್ಬದಲ್ಲಿ ರಾಯರನ್ನು ಪೂಜಿಸಿ ಜೊತೆಗೆ ಶ್ರೀಹರಿಯನ್ನು ಪೂಜಿಸಿ ಧನ್ಯರಾಗೋಣ.

    ||ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು||

1 Comment

  1. Gururaj Nadgouda says:

    Very. Nice

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: