ಗುರುಗಳಾದ ಪರಮಪೂಜ್ಯ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಪಂಚಮ ಚಾತುರ್ಮಾಸ್ಯದ ಕಾಲದಲ್ಲಿ ಕ್ಹಣಕಾಲವೂ ಬಿಡದೆ, ಗುರುರಾಯರ ಸೇವೆಯಲ್ಲಿ ತಲ್ಲೀನರಾಗಿದ್ದರು. ಪ್ರತಿನಿತ್ಯವು ಹತ್ತು ಹಲವಾರು ರೀತಿಯಲ್ಲಿ ಉನ್ನತ ಸಾಧನೆಗಳನ್ನು ಮಾಡುತ್ತಿದ್ದರು, ಮಾಡಿಸುತ್ತಿದ್ದರು. ಒಂದೊಂದು ಇವರ ಸಾಧನೆಗಳೂ ಕೂಡ ಐತಿಹಾಸಿಕವಾಗಿ ದಾಖಲು ಮಾಡುವಷ್ಟು ಅದ್ಭುತವಾಗಿದ್ದವು. ಇಂಥ ಗುರುಗಳ ಸನ್ದಿಧಾನದಲ್ಲಿರುವ ನಮ್ಮೆಲ್ಲರ ಮಾತು ಒಂದೇ – “ವಯಂ ಧನ್ಯಾಃ’.
ಶ್ರೀಪಾದಂಗಳವರು ರಾಮಾಯಣ ಮಹಾಭಾರತಾದಿ ಗ್ರಂಥಗಳಿಂದ ಅನೇಕ ಸುಭಾಷಿತಗಳನ್ನು ಸಂಗ್ರಹಿಸಿ, ವೃತ್ತಪತ್ರಿಕೆಗಳಲ್ಲಿ ಮುದ್ರಿಸಲು ಅನುಗ್ರಹಪೂರ್ವಕವಾಗಿ ನೀಡಿದ್ದರು. ಶ್ರೀಪಾದಂಗಳವರು ನುಡಿಯುವ ಪ್ರತಿಯೊಂದು ಮಾತುಗಳು ಹಾಗೂ ಬರವಣಿಗೆಗಳು ಶ್ರೀವೇದವ್ಯಾಸದೇವರ ಹಾಗೂ ಉಳಿದ ಜ್ಞಾನಿವರೇಣ್ಯರ ಮಾತುಗಳನ್ನೇ ಅನುಸರಿಸುತ್ತವೆ. ಆದ್ದರಿಂದ ಶ್ರೀಪಾದಂಗಳವರ ಮುಖಕಮಲದಿಂದ ಹೊರಹೊಮ್ಮಿದ ಸುಮಧುರ ಮಾತುಗಳೇ ಈ ಸುಭಾಷಿತಗಳು. ಆದ್ದರಿಂದ ಈ ಕೃತಿಗೆ “ಶ್ರೀಸುಬುಧೇಂದ್ರತೀರ್ಥರ ಮಾತುಗಳು ಸುಮಧುರ ಸುಭಾಷಿತಗಳು’ ಎಂಬ ಹೆಸರು ಸಂಪೂರ್ಣವಾಗಿ ಅನ್ವರ್ಥಕವಾಗಿದೆ.
ಜೀವನದಲ್ಲಿ ಮನುಷ್ಯನಾಗಲು ಮೊದಲು ವಿದ್ಯೆಯನ್ನುಗಳಿಸು. ಉತ್ತಮ ಅನುಷ್ಠಾನಶೀಲನಾಗಿ ತಪಸ್ವಿಯೆನಿಸು. ದಾನ ಮಾಡುವ ಮೂಲಕ ಪರೋಪಕಾರಿಯೆನಿಸು. ಜ್ಞಾನಿಯಾಗು, ಶೀಲವಂತನಾಗು, ಗುಣಶಾಲಿಯಾಗು, ಧರ್ಮನಿಷ್ಠನಾಗು. ಈ
ಗುಣಗಳಲ್ಲಿ ಎಲ್ಲವನ್ನೂ ಹೊಂದು. ಸಾಧ್ಯವಾಗದಿದ್ದರೆ ಒಂದನ್ನಾದರೂ ಹೊಂದು. ಒಂದನ್ನೂ ಹೊಂದದಿದ್ದರೆ ಮನುಷ್ಯಜನ್ಮವೇ ವ್ಯರ್ಥ. ಭೂಮಿಗೆ ಭಾರ, ಮನುಷ್ಯರೂಪದಿಂದ ಸಂಚರಿಸುವ ಮೃಗ.
ಯೇಷಾಂ ನ ವಿದ್ಯಾ ನ ತಪೋ ನ ದಾನಂ
ಜ್ಗಾನಂ ನ ಶೀಲಂ ನ ಗುಣೋ ನ ಧರ್ಮಃ ।
ತೇ ಮರ್ತ್ಯಲೋಕೇ ಭುವಿ ಭಾರಭೂತಾ
ಮನುಷ್ಯರೂಪೇಣ ಮೃಗಾಶ್ಮರಂತಿ ॥