ನಂಬಿ ಕೆಟ್ಟವರಿಲ್ಲವೊ…

Sri Madhava Teertharu
September 19, 2020
Purusha Sukta – 6
September 22, 2020

ನಂಬಿ ಕೆಟ್ಟವರಿಲ್ಲವೊ…

“ಶ್ರೀ ರಾಘವೇಂದ್ರಃ ಸಕಾಲಪ್ರದಾತ” ಎಂದು ಹೇಳಿದಹಾಗೆ, ರಾಯರು ನಮಗೆ ಯಾವ ಕಾಲಕ್ಕೂ ಸಹ ಎಲ್ಲವನ್ನು ಕೊಡುವ ಕಲ್ಪವೃಕ್ಷವಿದ್ದಂತೆ.

“ನಂಬಿ ಕೆಟ್ಟವರಿಲ್ಲವೊ ರಾಯರ ಪಾದ ನಂಬಿ ಕೆಟ್ಟವರಿಲ್ಲವೊ,
ನಂಬಿದ ಜನರಿಗೆ ಬೆಂಬಲ ತಾನಾಗಿ
ಹಂಬಲಿಸಿದ ಫಲ ತುಂಬಿ ಕೊಡುವರ” ಎಂದು ದಾಸರು ಹೇಳಿದ ಹಾಗೇ ರಾಯರನ್ನು ನಂಬಿ ಬಂದ ಭಕ್ತರು ಎಂದಿಗೂ ನಿರಾಸೆಯಾಗಿ ಹೋದವರೇ ಇಲ್ಲ, ಈಗಲೂ ಸಹ ಇಂತಹ ಉಧಾಹರಣೆಗಳು ಸಾಕಷ್ಟು ಇವೆ.

“ನಿನಗೆ ತಪ್ಪದು ಎನ್ನ ಕಾಯ್ವದು
ಎನಗೆ ತಪ್ಪದು ನಿನ್ನ ಭಜಿಸೊದು
ಜನುಮ ಜನುಮಕೆ ಸಿದ್ಧವೆಂದಿಗು ಪುಸಿಯ ಮಾತಲ್ಲ″

ಎಂದು ಗುರುಜಗನ್ನಾಥ ದಾಸರು ಹೇಳಿದ ಹಾಗೇ ನಮಗೆ ಕಲಿಯುಗದಲ್ಲೂ ಬೇಡಿದ ವರಗಳನ್ನು ಕೊಡುವ, ಹರಿಯಲ್ಲಿ ಭಕುತಿಯನ್ನು ಕೊಡುವ ರಾಯರ ಭಜಿಸದಲೇ ಇರುವುದಕ್ಕೆ ಸಾಧ್ಯವೇ? 
ರಾಯರಗೇ ಶರಣು ಹೋದಮೇಲೆ, ಕಲ್ಪವೃಕ್ಷದಂತಿರುವ ರಾಯರ ನಮ್ಮನು ಕಾಯದೇ ಇರುತ್ತಾರೆಯೇ?

ಘೋರ ಕಲಿಯುಗದ ಭಾದೆ ಯಾವ ಜೀವಿಗು ತಪ್ಪಿದ್ದಲ್ಲ.

ಪ್ರತಿ ಜೀವಿಯು ತಮ್ಮ ತಮ್ಮ ಕರ್ಮಾನುಸಾರವಾಗಿ ಬಂದ ಫಲಗಳನ್ನು ಅನುಭವಿಸಲೇ ಬೇಕು. ಇಂತಹ ಕಲಿಯುಗದಲ್ಲಿ ಗುರುಗಳ ಕಾರುಣ್ಯ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ರಾಘವೇಂದ್ರ ರಾಯರಂತಹ ಕರುಣಾಮಯಿ ಗುರುಗಳನ್ನು ಪಡೆದ ನಾವು, ಪೂರ್ವಜನ್ಮದ ಸುಕೃತವೇ ಸರಿ.

ರಾಯರ ತದನಂತರ ಬಂದ ಎಲ್ಲಾ ಮಾಧ್ವ ಯತಿಗಳು, ಎಲ್ಲಾ ದಾಸರು ಅವರ ಮಹಿಮೆಯನ್ನು ಬಹಳ ಭಕ್ತಿಯಿಂದ ವರ್ಣಿಸಿದ್ದಾರೆ. ನಮಗೆ ಈಗಾಗಲೇ  ದಾರಿ ತೋರಿಸಿ ಹೀಗೆ ಹೋಗಬೇಕು ಅನ್ನೋದು ಕೂಡಾ ಹೇಳಿದ್ದಾರೆ. ಜ್ಞಾನಪೂರ್ವಕವಾಗಿ ರಾಯರಲ್ಲಿ ಭಕ್ತಿ ಮಾಡಿದರೆ ಸಾಕು, ರಾಯರ ಕೃಪಾ ದೃಷ್ಟಿ ನಮ್ಮ ಮೇಲೆ ಸದಾ ಇರುತ್ತದೆ. 

“ಅಧಿಕಸ್ಯ ಅಧಿಕಂ ಫಲಂ” ಎಂಬಂತೆ ಅಧಿಕ ಮಾಸದಲ್ಲಿ ಮಾಡಿದ ಎಲ್ಲಾ ಕಾರ್ಯಗಳಿಗೆ ಅಧಿಕ ಫಲವಿರುವುದು. 

ಇಂತಹ ಶ್ರೇಷ್ಠ ಮಾಸದಲ್ಲಿ ರಾಯರ ಸೇವೆ ಹಾಗು ರಾಯರಿಗೆ ಭಕ್ತಿಯಿಂದ ಪೂಜಿಸಿದರೆ ಖಂಡಿತ ಅಧಿಕ ಫಲ ಬರುತ್ತದೆ,  ಎಷ್ಟಾದರೂ ನಮ್ಮ ರಾಯರು ಕರುಣಾಮಯಿ ಅಲ್ಲವೇ?

2 Comments

  1. Dilipkumar Desai says:

    Excellent I am Gujarati I am devoted my self sinces 1994 as I got opportunity from respected RVRAO Mumbhai he asked me to complete construction work at Jogshweri mutt, I got miracles experience while doing that, in that period swamyji from mantralayam visit there, it was reall miracle when Swamy put his Own Garland to my nick, since that my Fortune changed I am at present in Uk, seddenly I had chronic kidney disease, with out having dyelisis I got kidney transplant from doner.

  2. Sir,Articles are coming in a good way. The only problem is that the articles couldn’t be shared on WhatsApp and the telegram apps.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: