ಗುರುಗಳಾದ ಪರಮಪೂಜ್ಯ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಪಂಚಮ ಚಾತುರ್ಮಾಸ್ಯದ ಕಾಲದಲ್ಲಿ ಕ್ಹಣಕಾಲವೂ ಬಿಡದೆ, ಗುರುರಾಯರ ಸೇವೆಯಲ್ಲಿ ತಲ್ಲೀನರಾಗಿದ್ದರು. ಪ್ರತಿನಿತ್ಯವು ಹತ್ತು ಹಲವಾರು ರೀತಿಯಲ್ಲಿ ಉನ್ನತ ಸಾಧನೆಗಳನ್ನು ಮಾಡುತ್ತಿದ್ದರು, ಮಾಡಿಸುತ್ತಿದ್ದರು. ಒಂದೊಂದು ಇವರ ಸಾಧನೆಗಳೂ ಕೂಡ ಐತಿಹಾಸಿಕವಾಗಿ ದಾಖಲು ಮಾಡುವಷ್ಟು ಅದ್ಭುತವಾಗಿದ್ದವು. ಇಂಥ ಗುರುಗಳ ಸನ್ದಿಧಾನದಲ್ಲಿರುವ ನಮ್ಮೆಲ್ಲರ ಮಾತು ಒಂದೇ – “ವಯಂ ಧನ್ಯಾಃ’.
ಶ್ರೀಪಾದಂಗಳವರು ರಾಮಾಯಣ ಮಹಾಭಾರತಾದಿ ಗ್ರಂಥಗಳಿಂದ ಅನೇಕ ಸುಭಾಷಿತಗಳನ್ನು ಸಂಗ್ರಹಿಸಿ, ವೃತ್ತಪತ್ರಿಕೆಗಳಲ್ಲಿ ಮುದ್ರಿಸಲು ಅನುಗ್ರಹಪೂರ್ವಕವಾಗಿ ನೀಡಿದ್ದರು. ಶ್ರೀಪಾದಂಗಳವರು ನುಡಿಯುವ ಪ್ರತಿಯೊಂದು ಮಾತುಗಳು ಹಾಗೂ ಬರವಣಿಗೆಗಳು ಶ್ರೀವೇದವ್ಯಾಸದೇವರ ಹಾಗೂ ಉಳಿದ ಜ್ಞಾನಿವರೇಣ್ಯರ ಮಾತುಗಳನ್ನೇ ಅನುಸರಿಸುತ್ತವೆ. ಆದ್ದರಿಂದ ಶ್ರೀಪಾದಂಗಳವರ ಮುಖಕಮಲದಿಂದ ಹೊರಹೊಮ್ಮಿದ ಸುಮಧುರ ಮಾತುಗಳೇ ಈ ಸುಭಾಷಿತಗಳು. ಆದ್ದರಿಂದ ಈ ಕೃತಿಗೆ “ಶ್ರೀಸುಬುಧೇಂದ್ರತೀರ್ಥರ ಮಾತುಗಳು ಸುಮಧುರ ಸುಭಾಷಿತಗಳು’ ಎಂಬ ಹೆಸರು ಸಂಪೂರ್ಣವಾಗಿ ಅನ್ವರ್ಥಕವಾಗಿದೆ.
ಆದಿಶೇಷನು ಬಲು ಭಾರವಾದ ಭೂಮಿಯನ್ನು ತನ್ನ
ಹೆಡೆಯಲ್ಲಿ ಹೊತ್ತಿರುವನು. ಭಾರವಾಯಿತೆಂದು ಭೂಮಿಯನ್ನು
ಎಂದೂ ಕೂಡ ಕೆಳಗೆ ಇಳಿಸಿಲ್ಲ. ಪರಿಶ್ರಮದಿಂದ ಸೂರ್ಯನು
ಪ್ರತಿನಿತ್ಯ ಸಂಚಾರ ಮಾಡುತ್ತಲೇ ಇರುವನು. ಎಂದೂ ಕೂಡ
ತನ್ನ ಸಂಚಾರವನ್ನು ನಿಲ್ಲಿಸಿಲ್ಲ. ಇದೇ ಉತ್ತಮರ ಲಕ್ಷಣ. ತಾವು
ಯಾವ ಕೆಲಸವನ್ನು ಒಪ್ಪಿಕೊಂಡು ಪ್ರಾರಂಭಿಸುತ್ತಾರೋ, ಎಂದೂ
ಕೂಡ ಆ ಕೆಲಸವನ್ನು ಅವರು ಬಿಡುವುದಿಲ್ಲ. ಸಂಪೂರ್ಣವಾಗಿ
ನಿರ್ವಹಿಸುತ್ತಾರೆ. ಇದೇ ಮಹಾತ್ಮರ ಲಕ್ಷಣ. ಸಣ್ಣ ಕೆಲಸವೇ
ಆಗಲಿ, ದೊಡ್ಡ ಕೆಲಸವೇ ಆಗಲಿ ಅಂದುಕೊಂಡ ಕೆಲಸ ಮಾಡಿ
ಮುಗಿಸಲೇ ಬೇಕು.
ಕಿಂ ಶೇಷಸ್ಯ ಭರವ್ಯಥಾ ನ ವಪುಷಿ ಕ್ಷ
ನ ಕ್ಲಿಪತ್ಯೇಷ ಯತ್
ಕಿಂ ವಾ. ನಾಸ್ತಿ ಪರಿಶ್ರಮೋ ದಿನಪಶೇರಾಸ್ತೇ ನ ಯನ್ನಿಶ್ಶಲಃ।
ಕಿಂ ತ್ವಂಗೀಕೃತಮುತ್ಸಜನ್ ಕೃಪಣವತ್
ಶ್ಲಾಘ್ಯೋ ಜನೋ ಲಜ್ಜತೇ
ನಿರ್ವ್ಯೂಢಂ ಪ್ರತಿಪನ್ನವಸ್ತುಷು
ಸತಾಮೇತದ್ಧಿ ಗೋತ್ರವ್ರತಂ ॥