ರಾಘವೇಂದ್ರ ಪಾಹಿಮಾಂ, ರಾಘವೇಂದ್ರ ರಕ್ಷಮಾಂ

History of Sri Vyasatatvajna Teertharu – Part 4/n
September 11, 2020
Purusha Sukta – 5
September 14, 2020

ರಾಘವೇಂದ್ರ ಪಾಹಿಮಾಂ, ರಾಘವೇಂದ್ರ ರಕ್ಷಮಾಂ

“ಸಾಕ್ಷೀ ಹಯಾಸ್ಯೋತ್ರ ಹಿ” ಎಂದು ಸಾಕ್ಷಾತ್ ಶ್ರೀ ಹಯಗ್ರೀವ ಪರಮಾತ್ಮನೇ,  ರಾಯರ ಕರುಣೆಗೆ ನಾನೆ ಸಾಕ್ಷಿ ಎಂದು ನುಡಿದಿದ್ದಾನೆ

ಇದನ್ನೇ ಗೋಪಾಲದಾಸರು “ಧರೆಯಮ್ಯಾಲಿದ್ದ ಜನರ ಪೊರೆಯ ಬೇಕೆಂದೆನುತ |
ಹರಿ ನುಡಿದನು ಇವರ ಪರಮ ದಯಾಳುತನವ |
ಗುರುವಂತರ್ಯಾಮಿಯಾಗಿ ವರವಾನೀಯಲು ಜಗಕ್ಕೆ|”
ಎಂದು ರಾಘವೇಂದ್ರರ ಸುಳಾದಿಯಲ್ಲಿ ಹೇಳಿದ್ದಾರೆ. 

ರಾಯರ ಆಶೀರ್ವಾದ ಹಾಗು ರಾಯರ ಕರುಣೆಯ ಬಲ ನಮಗೆ ಬಹಳ ಅವಶ್ಯಕ. ರಾಯರ ಸ್ತೋತ್ರ ಪಠನೆ ಮಾತ್ರದಿಂದ ನಮ್ಮೆಲ್ಲ ಇಷ್ಟಾರ್ಥಗಳು ಈಡೇರಿವುವು ಎಂದು ಹಯಗ್ರೀವ ನಾಮಕ ಪರಮಾತ್ಮನೇ ನುಡಿದಿದ್ದಾನೆ.

ನಮಗೆ ರಾಯರ ಸ್ತೋತ್ರವು ರಾಯರ ಕರುಣೆ ಪಡೆಯುವುದಕ್ಕೆ ಒಂದು ಸಾಧನವಿದ್ದಂತೆ, ಈ ಸಾಧನವನ್ನು ದಿನನಿತ್ಯ ಉಪಯೋಗಿಸಿದರೆ ನಮಗೆ ಅವರ ಕೃಪಾ ದೃಷ್ಟಿ ಬಿದ್ದೆ ಬೀಳುತ್ತೆ. ಗುರು ಜಗನ್ನಾಥದಾಸರು ಅಷ್ಟೋತ್ತರ ಸಿದ್ಧಿಯ ಬಗೆಯನ್ನು ರಾಘವೇಂದ್ರ ವಿಜಯದಲ್ಲಿ

“ಇಂದು ಸೂರ್ಯಗ್ರಹಣಪರ್ವವು
ಬಂದ ಕಾಲದಿ ನೇಮಪೂರ್ವಕ
ಪೊಂದಿದಾಸನದಲ್ಲಿ ಕುಳಿತಷ್ಟೋತ್ತರಾವರ್ತಿ
ಒಂದೆ ಮನದಲಿ ಮಾಡೆ ಗುರುವರ
ನಂದದಲಿ ಸಕಲಾರ್ಥ ಸಿದ್ದಿಯ
ತಂದುಕೊಡುವನು ತನ್ನ ಸೇವಕ ಜನರ ಸಂತತಿಗೆ” 
ಎಂದು ಹೇಳಿದ್ದಾರೆ.

“ಈತನೊಲಿಯಲು ಪ್ರಾಣನೊಲಿವನು
ವಾತನೊಲಿಯಲು ಹರಿಯು ಒಲಿವಾ
ಈತ ಸಕಲಕೆ ಮುಖ್ಯ ಕಾರಣನಾಗಿ ಇರುತ್ತಿಪ್ಪ”
ಎಂದು ಗುರು ಜಗನ್ನಾಥದಾಸರು ಹೇಳಿದ್ದಾರೆ.

ಅಂದರೆ ರಾಯರ ನಮಗೆ ಒಲಿದರೆ ಜೀವೋತ್ತಮನಾದ ಪ್ರಾಣದೇವರು ನಮಗೆ ಒಲಿಯುವನು, ವಾಯು ದೇವರು ಒಲಿದರೆ, ಶ್ರೀಹರಿ ಒಲಿಯುವುನು ಎಂದು ಹೇಳಿದ್ದಾರೆ.
ಸೃಷ್ಟಿಗೆ ಕಾರಣನಾದ, ಸರ್ವಂತರ್ಯಾಮಿಯಾದ ನಾರಾಯಣನ ವೊಲಿಸಿಕೊಳ್ಳೋ ಮಾರ್ಗವಾಗ್ಗಿದ್ದರಿಂದ ರಾಯರೇ ಮುಖ್ಯ ಕಾರಣರೆಂದು ಸೂಚಿಸಿದ್ದಾರೆ. 

ಎಷ್ಟು ಜನ್ಮದ ಪುಣ್ಯವೇ ಸರಿ ನಮಗೆ ರಾಯರಂತಹ ಗುರುಗಳು ಸಿಕ್ಕಿದ್ದಾರೆ. ಏನೇ ದುರಿತಗಳು ಬಂದರೆ ನಮ್ಮನ್ನು ಪಾಲಿಸುವ ಮತ್ತು ಏನೇ ಕಷ್ಟಗಳು, ಆಪತ್ತುಗಳು ಬಂದರೂ ನಮ್ಮನು ಅದರಿಂದ ರಕ್ಷಿಸುವ ರಾಯರಲ್ಲಿ

“ರಾಘವೇಂದ್ರ ಪಾಹಿಮಾಂ, ರಾಘವೇಂದ್ರ ರಕ್ಷಮಾಂ”

ಎಂದು ಭಕ್ತಿ ಪೂರ್ವಕವಾಗಿ ಮೊರೆಹೋದರೆ ನಮ್ಮನು ರಕ್ಷಿಸದೇ ಇರಲಾರರು. 

3 Comments

  1. Sadguropahimamrakshamam

  2. Parthasarathy. P says:

    Om sri Ragavendra swamye Namah

  3. S.S.Balakirchenane says:

    Om Sri Ragavendra Namaga

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: