ರಾಘವೇಂದ್ರರ ಮಹಿಮೆ

Purusha Sukta – 12
November 2, 2020
Sri Vasudhendra Teertharu
November 8, 2020

ರಾಘವೇಂದ್ರರ ಮಹಿಮೆ

ಎಲ್ಲಾ ದಾಸವರೇಣ್ಯರು ರಾಯರ ಕರುಣೆ ಬಗ್ಗೆ ಹಾಡಿ ಹೊಗಳಿದ್ದಾರೆ. ಕೆಲವೊಂದು ಘಟನೆಗಳು ನಮ್ಮ ಊಹೆಗೆ ಬಾರದಿದ್ದರೂ, ಸತ್ಯವೆನಿಸಿ ನಮ್ಮ ನಿಮ್ಮೆಲ್ಲರ ಕಣ್ಣು ಮುಂದೆ ಇವೆ, ಇನ್ನೂ ಆಗುತ್ತಲೇ ಇವೆ. ಇದೆಲ್ಲ ರಾಯರ ಕರುಣೆಯಿಂದ ಮಾತ್ರ ಸಾಧ್ಯ.
“ಕುಷ್ಟ ರೋಗಾದಿಗಳು ನಷ್ಟಮಾಡುವಂತ,
ಅಷ್ಟಮಹಿಮೆಯುತ ಶ್ರೇಷ್ಠ ಮುನಿಯೆ ಬೇಗ “
ಎಂದು ಮಧ್ವೇಶ ವಿಠಲರು ಹೇಳಿದ ಹಾಗೇ ರಾಯರು ಕರುಣೆಯಿಂದ ಮಹಾ ಮಹಾ ರೋಗಗಳು ಕೂಡಾ ನಾಶವಾಗುತ್ತವೆ.

ಇದನ್ನೇ ಅಭಿನವ ಜನಾರ್ಧನವಿಠಲರು,
“ಎಷ್ಟು ಪೇಳಲಿ ಇವರ ಮಹಿಮೆಯ ಹುಟ್ಟು ಬಂಜೆಗೆ ಮಕ್ಕಳು
ಕೊಟ್ಟು ಸಲಹುವ ಕುಷ್ಠರೋಗ ವಿಶಿಷ್ಠನಾಶನ ಮಾಡುವ
ಕಷ್ಟಗಳ ಪರಿಹರಿಸಿ ಬೇಡಿದ
ಇಷ್ಟ ಕಾಮ್ಯವ ಸಲಿಸುವ
ಸೃಷ್ಟಿಯೊಳು ಈ ಚರ್ಯಬಲು ಉ
ತೃಷ್ಟವನ್ನು” ಎಂದು ಹೇಳಿದ್ದಾರೆ.
 ರಾಯರು ಸಂತಾನವಿಲ್ಲದವರಿಗೆ ಸಂತಾನ ಭಾಗ್ಯ, ಕುಷ್ಠ ರೋಗಗಳಂತಹ ಮಹಾ ರೋಗಗಳನ್ನು ಪರಿಹರಿಸುತ್ತಾರೆ, ಜೊತೆಗೆ ಅವರ ಎಲ್ಲಾ ಕಷ್ಟಗಳನ್ನು ದೂರ ಮಾಡಿ, ಬೇಡಿದ ವರಗಳನ್ನು ಕೊಡುತ್ತಾರೆ.

“ಕುರುಡಕುಂಟನು ಕಿವುಡ ಮೂಕನು ಪರಿಪರಿಯ ಗ್ರಹಪೀಡಿತ
ನರರು ಬಂದು ಸೇವಿಸಲು ಅಘ ಪರಿಹರಿಸಿ ಫಲವೀವುದು”
ಎಂದು ಅಭಿನವ ಜನಾರ್ಧನವಿಠಲರು ಹೇಳಿದ ಹಾಗೇ ಕುರುಡುತನ ಇರಲಿ, ಕುಂಟತನ ಇರಲಿ, ಮಾತನಾಡಲು ಬಾರದಿರಲಿ, ಗ್ರಹ ದೋಷಗಳಿಂದ ವಂಚಿತರಾಗಿರಲಿ, ಯಾರೇ ಅವರಲ್ಲಿ ಬಂದು ಭಕ್ತಿಯಿಂದ ಸೇವೆ ಮಾಡಿದರೆ ರಾಯರು ಅವರವರ ಬಾಧೆಗಳನ್ನು ಪರಿಹರಿಸಿ ಸುಖವನ್ನು ಕೊಡುತ್ತಾರೆ.
ಧಾರ್ಮಿಕವಾಗಿ ಅವರ ಗ್ರಂಥಗಳಿಂದ ನಮ್ಮನು ಕಲಿಬಾಧೆಯಿಂದ ತಪ್ಪಿಸಿದರೆ, ಲೌಕಿಕವಾಗಿಯೂ ಕೂಡಾ ನಮ್ಮೆಲ್ಲರ ಬಾಧೆಗಳನ್ನು ರಾಯರು ಪರಿಹರಿಸುತ್ತಾರೆ.
ಇಂತಹ ರಾಯರನ್ನು ಸದಾಕಾಲ ಸ್ಮರಿಸೋಣ.

       ||ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: