ಪ್ರಾಣೇಶದಾಸರಾಯರು – ಭಾಗ ೨

ಪ್ರಾಣೇಶದಾಸರಾಯರು – ಭಾಗ ೧
October 23, 2020
Purusha Sukta – 11
October 26, 2020

ಪ್ರಾಣೇಶದಾಸರಾಯರು – ಭಾಗ ೨

ಪ್ರಾಣಪತಿಪದದ್ವಂದ್ವ ಪಂಕಜಾಸಕ್ತ ಮಾನಸ |
ಶಮಾದಿಗುಣ ಸಂಯುಕ್ತಂ ಶ್ರೀ ಪ್ರಾಣೇಶಗುರುಂ ಭಜೆ ||
ಕರವ ಮುಗಿದು ನಿಮ್ಮ ಮಹಿಮೆ| ಕೊಂಡಾಡುವೆ ದಾಸರಾಯ|
ಹರಿದಾಸರ ಪ್ರಿಯ ನಮೊ ನಮೋ| ಪ್ರಾಣೇಶದಾಸರಾಯ||

ಗಾಲವ ಚರಿತ್ರೆ, ಕಾಲಿಯಾಮರ್ಧನ ಕತೆ, ಬುಡ್ಡಿಬ್ರಹ್ಮನ ಕತೆ, ಗೋಪಿಕಾವಿಲಾಸ, ಭ್ರಮರಗೀತಾ, ಮುಯ್ಯದ ಪದ, ಶ್ರೀ ಹರಿವಾಯುಸ್ತುತಿ, ಸೀತಾ ಸ್ವಯಂವರ, ಕಾಳೀ ಸ್ವಯಂವರ, ಹನುಮದ್ ವಿಲಾಸ (ಗರುಡನ ಗರ್ವಹರಣ) , ಶ್ರೀ ಭೀಮಸೇನ ವಿಲಾಸ (ಕೀಚಕನ ವಧಾ), ವೀರಭದ್ರ ವಿಲಾಸ,(ದಕ್ಷಾಸುರ ಧ್ವಂಸ), ಪಾರ್ಥವಿಲಾಸ (ಸುಭದ್ರಾಹರಣ), ಅನಿರುದ್ದ ವಿಲಾಸ(ಉಷಾಪಹರಣ) , ವಶಿಷ್ಟ ವಿಶ್ವಾಮಿತ್ರಾಖ್ಯಾನ, ಊರ್ಧ್ವಪುಂಡ್ರ ಮಹಾತ್ಮೆ, ತಿಥಿ ತ್ರಯ ನಿರ್ಣಯ ಮುಂತಾದ ಅನೇಕ ಕಥೆ ಗಳನ್ನು ಬಹು ರಸಭರಿತವಾಗಿಯು,ಓದುವಾಗ ಮತ್ತು ಕೇಳುವಾಗ ಭಕುತಿ ಉದ್ರೇಕಗೊಳ್ಳುವ ಶೈಲಿ ಯಲ್ಲಿ ರಚನೆ ಯನ್ನು ಮಾಡಿರುವರು.

ಇವರ ರಚನ ಶೈಲಿ ಕೆಲವುಹಳಗನ್ನಡದಲ್ಲಿ ಮತ್ತು ಕೆಲವು ಸಂಸ್ಕೃತ ಪದಗಳ ಬಳಕೆ,ಕೆಲವು ಸರಳ ಪದಗಳು ಇರುವದು.

ಕೆಲವು ಕಡೆ ಅನೇಕ ಪುರಾಣದ ಪ್ರಮೇಯವು ಮತ್ತು ಅನೇಕ ಗೌಪ್ಯ ಗೋಷ್ಠಿಗಳಿಂದ ಕೂಡಿದ ದಾಸರ ಪದಗಳು ಅರ್ಥ ಮಾಡಿಕೊಳ್ಳುವುದು ಕಷ್ಟ.

ಇವೆಲ್ಲವೂ ನೋಡಿದಾಗ ದಾಸರ ವಿಧ್ಯಾ ಪ್ರತಿಭೆಯನ್ನು ಮತ್ತು ಭಗವಂತನ ಅನುಗ್ರಹಕ್ಕೆ ಪಾತ್ರರಾದವರೆಂದು ತಿಳಿಯುತ್ತದೆ

ಶ್ರೀ ಪ್ರಾಣೇಶದಾಸರು ಪ್ರತಿ ನಿತ್ಯ ಪ್ರಾತಃ ಕಾಲದಲ್ಲಿ ತಮ್ಮ ನಿತ್ಯ ಅಹ್ನೀಕವನ್ನು ತೀರಿಸಿಕೊಂಡು ತಮ್ಮ ಗುರುಗಳಾದ ಶ್ರೀ ಜಗನ್ನಾಥ ದಾಸರು ಕೊಟ್ಟಂತಹ ಶ್ರೀ ಸೀತಾರಾಮ ಲಕ್ಷ್ಮಣ, ಶ್ರೀ ವೇದವ್ಯಾಸರು, ಪಟ್ಟಾಭಿರಾಮ, ತಾಂಡವ ಕೃಷ್ಣ, ಶ್ರೀ ಲಕ್ಷ್ಮೀ ವೆಂಕಟೇಶ ಮುಂತಾದ ೧೪ಪ್ರತಿಮೆಗಳನ್ನು ಅರ್ಚಿಸಿ ಶ್ರೀ ಗೋಪಾಲ ಕೃಷ್ಣ ನ ಸೇವೆಯೆಂದು ಭಾವಿಸಿ ತಮ್ಮ ಗುರುಗಳ ವಾಣಿಯಂತೆ ಗೃಹ ಕರ್ಮವ ಬ್ಯಾಸರದಲೆ ಪರಮೋತ್ಸಹದಲಿ ಮಾಡುತ ಮೂಜಗದಾ|
ಮಹಿಮನ ಸೇವೆ ಇದೇ ಎನುತಲಿ.|
ಫಲವಿದು ಬಾಳ್ದುದಕೆ ..
ಇದನ್ನು ಆಚರಣೆ ಮಾಡುತ್ತಾ ಇದ್ದರು.

ತಮ್ಮ ಗೋವುಗಳನ್ನು ಹೊಡೆದು ಕೊಂಡು ಅಡವಿಗೆ ಹೋಗಿ ಅಲ್ಲಿ ಇದ್ದ ಗೋಪಾಲಕರಿಗೆ ಅವುಗಳನ್ನು ಮೇಯುವದಕ್ಕೆ ಒಪ್ಪಿಸಿ ತಾವು ಒಂದು ಗಿಡದ ಕೆಳಗೆ ಕುಳಿತು ಪರಮಾತ್ಮನ ಕುರಿತಾದ ಅನೇಕ ಸ್ತೋತ್ರ ಪದಗಳನ್ನು ರಚಿಸಿ ವಿಶೇಷವಾಗಿ ಭಾಗವತದ ದಶಮ ಸ್ಕಂದ ಭಾಗವತ ಶ್ರೀ ಕೃಷ್ಣ ದೇವರ ಚರಿತ್ರೆ ಪಾರಾಯಣ ಮಾಡುವರು.

ನಂತರ ಮರಳಿ ತಮ್ಮ ಸ್ವಗೃಹಕ್ಕೆ ಗೋವುಗಳನ್ನು ಹೊಡೆದು ಕೊಂಡು ಹಿಂತಿರುಗಿ ಬರುವರು ಮತ್ತು ಪ್ರತಿ ವರುಷ ಶ್ರೀ ಜಗನ್ನಾಥ ದಾಸರು ತಮ್ಮ ತಂದೆಯವರ ಪಿತೃ ಕಾರ್ಯ ಮಾಡುವಾಗ ಇವರೊಬ್ಬರಲ್ಲಿಯೇ “ಏಕಸಂತ್ ಬಹುದಾ ಕಲ್ಪ ಯಂತಿ”
ಎಂಬೋ ರೀತ್ಯಾ ಚಿಂತನೆಯನ್ನು ಮಾಡಿ ತಮ್ಮ ಪಿತೃಗಳನ್ನು ಸಂತೃಪ್ತಿಗೊಳಿಸುತ್ತಾ ಇದ್ದರು.
ಇದನ್ನು ನೋಡಲಾಗಿ ಶ್ರೀ ಪ್ರಾಣೇಶದಾಸರು ಸಾಂಶರು ದೇವತೆಗಳು ಅನ್ನಲಿಕ್ಕೆ ಸ್ವಲ್ವವಾದರು ಸಂಶಯವಿಲ್ಲ…

ಸಂಗ್ರಹ..ಲಿಂಗಸೂಗುರು ಪ್ರಾಂತ್ಯದ ಹಿರಿಯರಿಂದ ಕೇಳಿದ್ದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: