ಶ್ರೀ ವ್ಯಾಸರಾಜರು ಕಂಡ ಶ್ರೀಕೃಷ್ಣ

ಶ್ರೀ ವ್ಯಾಸರಾಜರು ಕಂಡ ಶ್ರೀಕೃಷ್ಣ
August 15, 2020
Rayaru – Purusha Sukta – 1
August 17, 2020

ಶ್ರೀ ವ್ಯಾಸರಾಜರು ಕಂಡ ಶ್ರೀಕೃಷ್ಣ

Continued from Part 1

ಶ್ರೀ ಕೃಷ್ಣ ಲೀಲೆ

“ಎಷ್ಟುಜನ್ಮದಲಿ ಮಾಡಿದಳೋ ಗೋಪಿ ಶ್ರೀಕೃಷ್ಣನ ಲೀಲೆಯನು ನೆನೆದು ಹಿಗ್ಗುವ ಸುಕೃತ’ ಎಂಬ ಕೃತಿಯಲ್ಲಿ ಯಶೋದೆಯ ಪುಣ್ಯವನ್ನು ಬಣ್ಣಿಸುತ್ತಾರೆ.ಯಶೋದೆ ಹಾಕುವ ಮಾಲೆ ಭಗವಂತ ವೈಜಯಂತೀಮಾಲೆಯನ್ನಾಗಿಸಿಕೊಂಡನಂತೆ ಎಂಬಲ್ಲಿ ಭಗವಂತನ ಭಕ್ತವಾತ್ಸಲ್ಯವನ್ನು ಎತ್ತಿ ಹಿಡಿದಿದ್ದಾರೆ.’ಹರವಿ ಹಾಲನು ಬರಿದು ಮಾಡಿ ಬಂದ ಗೋಪಿ ಎಂಬ ಕೃತಿಯಲ್ಲಿ ಭಗವಂತನ ಉದರ ಜಗದುದರವಾಗಿದೆ ಎಂಬುದು ಧ್ವನಿಸುತ್ತದೆ.ಆಕಳ್ಹಾಲನು ಕಾಸಿ ಮೀಸಲೆಂದು ಇಟ್ಟಿದ್ದೇವೆ ಕೃಷ್ಣ ಮೀಸಲಳಿದು ಹೋದನೇ ಎನ್ನುವಲ್ಲಿ ಕೃಷ್ಣ ಸರ್ವವ್ಯಾಪ್ತನಾಗಿದ್ದಾನೆ ಅವನಿಗೆ ಮೀಸಲಿನ ಪ್ರಶ್ನೆಯೇ ಇಲ್ಲ ಎನ್ನುವಂತಿದೆ,’ನಿಪುಣ ಬೆಣ್ಣೆಕಳ್ಳ ನಿನ್ನ ಮಗನೇ ಗೋಪಿ? ನಮ್ಮ ತಪಸಿಗೊಲಿದು ಜನಿಸಿದ ಶ್ರೀಕೃಷ್ಣ ಗೋಪಿ ” ಇಲ್ಲಿ ಶ್ರೀ ಕೃಷ್ಣ ಯಶೋದೆ ಮಗನಲ್ಲ,ಪರಾತ್ಚರ ವಸ್ತು ಎನ್ನುವುದನ್ನು ಸಾರುತ್ತಾ ವಸ್ತ್ರಾಪಹಾರ ಮೊದಲಾದವು ಶ್ರೀ ಕೃಷ್ಣ ತನ್ನ ಸುಖಕ್ಕೋಸ್ಕರ ಮಾಡಿದ್ದಲ್ಲ ಅಗ್ನಿಪುತ್ರರಾದಾಗ ಪ್ರಾರ್ಥನೆ ಮಾಡಿ ತಪಸು ಮಾಡಿದರ ಫಲವೇ ರಾಸಲೀಲೆ ಹೊರತು ಸ್ವರಮಣನಾದ ಭಗವಂತನಿಗೆ ಇನ್ನೊಬ್ಬರಿಂದ ಸುಖದ ಅವಶ್ಯಕತೆ ಇಲ್ಲ. ಅವನು ಸದಾ ಆನಂದಮಯ ಚಿನ್ಮಯನಾಗಿದ್ದಾನೆ ಎಂಬುದು ವಿವರಿಸದಂತಿದೆ.

ಅನುಕ್ತ ಕಥನ

ಶ್ರೀ ಕೃಷ್ಣನಿಗೆ ಹಾಲು ಕೊಡಬಾರದೆಂಬ ಭರದಲ್ಲಿ ಒಮ್ಮೆ ಒಬ್ಬ ಗೋಪಿ ಬಿಸಿಹಾಲನ್ನು ಹೊತ್ತು ಹಾಲನ್ನು ಮಾರಲು ಹೊರಟಳು ದಾರಿಯಲ್ಲಿ ಶ್ರೀಕೃಷ್ಣ ಸಿಕ್ಕೇಬಿಟ್ಟ. ಹಾಲಿನ ಬೆಲೆಯನ್ನು ಹೇಳೇ ಗೋಪಿ ಕೇಳಿದ್ದು ಕೊಡುವೆ ಎಂದ.ಕೃಷ್ಣನ ಸೌಂದರ್ಯಕ್ಕೆ ಆಕರ್ಷಿತಳಾದ ಗೋಪಿ “ನಿನ್ನ ಮನಸ್ಸೇ ಹೊನ್ನೆಂದಳು. ಬೆಣ್ಣಗಳ್ಳ ಕೃಷ್ಣ ಕಣ್ಣು ಸನ್ನೆಯ ಮಾಡಿ ಮೋಹಿಸಿದ.ಆಗ ಗೋಪಿ ಪೇಚಿಗೆ ಸಿಲುಕಿ ಮನಸಲ್ಲಿ ತನ್ನನ್ನು ತಾನು ಪ್ರಶ್ನಿಸಿಕೊಂಡಳು * ನಾನು ಕೃಷ್ಣನಿಗೆ ಹಾಲು ಕೊಡಬಾರದೆಂಬ ಉದ್ದೇಶದಿಂದಲೇ ಹೊರಟವಳು ಆದರೆ ಇದೇನಿದು ಕೃಷ್ಣ ಮೋಹಿಸಿಬಿಟ್ಟನಲ್ಲ.’ಇತ್ತಲೇತಕೆ ಬಂದೆ?! ಕೆಟ್ಟೆನೆಲವೋ ಕೃಷ್ಣ” ಅತ್ತೆ ಮಾವರು ಕಂಡರೆ. ಏನು ಗತಿ ಎಂದೆಲ್ಲ ಗೋಗರೆಯುತ್ತಾಳೆ.ಆಗ ಕೃಷ್ಣ ಸಕ್ಕರೆ ಕೂಡಿದ ಪಾಲನ್ನು ಕುಡಿದು.ಗೋಪಿ ನಿನಗೇನು ಬೇಕು ಅದನ್ನೀವೆ. ಏನು ಬಯಸುವೆ ಎಂದು ಕೇಳುತ್ತಾನೆ.ಆಗ ಗೋಪಿ ಕೃಷ್ಣನಿಗೆ “ವಸ್ತುವೇತಕೆ ಪರವಸ್ತುವೇ ನೀನು ,ನಿನಗೆ ನನ್ನನೇ ಅರ್ಪಿಸಿಕೊಡಿದ್ದೇನೆ “ ಎಂದು ಹೇಳುತ್ತಾ ಪರವಸ್ತುವಿದ್ದಾಗ ಬೇರೆ. ಲೌಕಿಕ ಕಾಮನೆಗಳ ಬಯಕೆ ಅತ್ಯಂತ ತುಚ್ಚವಾದದ್ದು ಎಂಬ ಭಾವದಿಂದ ಗೋಪಿ
ಭಗವಂತನಲ್ಲಿ ಆತ್ಮನಿವೇದನೆ ರೂಪವಾದ ಭಕ್ತಿಯನ್ನು ತೋರಿದ್ದಾಳೆ. ಇದು ವ್ಯಾಸರಾಜರು ಹೇಳಿದ ನವೀನ ಕೃಷ್ಣ ಕಥೆ. ಬೇರೆ ಪುರಾಣಗಳಲ್ಲಿ ಹೇಳಿದ ವಿಷಯಗಳನ್ನು ಸಂಗ್ರಹಿಸಿದ್ದಾರೆ.ಇದರಿಂದ ಕೃಷ್ಣನಲ್ಲಿ ನಿಷ್ಕಾಮರೂಪವಾದ ಭಕ್ತಿಯನ್ನು ಮಾಡಬೇಕೆಂದು ವ್ಯಾಸರಾಜರು ಉಪದೇಶಿಸಿದ್ದಾರೆ.

ಶ್ರೀ ಕೃಷ್ಣನಲ್ಲಿ ಏನನ್ನು ಬೇಡಬೇಕು?

ಶ್ರೀ ವ್ಯಾಸರಾಜರು ಶ್ರೀಕೃಷ್ಣನಲ್ಲಿ ಬೇಡಬೇಕಾದ ವಿಷಯವನ್ನು ನಿರೂಪಿಸುತ್ತಾರೆ.ಶ್ರೀ ವ್ಯಾಸರಾಜರು ತೋರಿಕೊಟ್ಟ ಈ ಪ್ರಾರ್ಥನಾ ಶೈಲಿ ಅಧ್ಭುತವಾದದ್ದು. ಅನಿಮಿತ್ತ ಪ್ರತಿ ಜನುಮದಲಿ ಇದನೇ ನೀಡು.. ೧)ದ್ವಾದಶ ಊರ್ಧ್ವಪುಂಡ್ರ ಧಾರಣೆ ೨)ತುಲಸಿ ಮಾಲೆ ಹಾಕಿಕೊಳ್ಳುವ ಭಾಗ್ಯ ೩)ತಪ್ತಮುದ್ರಾಧಾರಣೆ ಮಾಡಿಕೊಂಡು ಭಗವತ್ಸ್ಮರಣೆಯನ್ನು ಯಾವಾಗಲೂ ಮಾಡುವ ವೈಷ್ಣವತ್ವ ೪)ಹರಿ ಸರ್ವೋತ್ತಮ,ರಾಣಿ ಲಕುಮಿ,ಬೊಮ್ಮ ಹರಿ ಇಂದ್ರಾದ್ಯಖಿಲರು ತವ ಸೇವಕರು ಎಂಬ ವರ ತಾರತಮ್ಯ,ಪಂಚಭೇದ ಸತ್ಯವೆಂದು ನೆರೆ ಪೇಳುವ ವಾಯುಮತದ ಸುಜ್ಜಾನ ಜನುಮ ಜನುಮಕೂ ಬೇಡಬೇಕು ೫) ಸೋತ್ತಮಾ ಗುರವಃ ಪ್ರೋಕ್ತಾಃ ಎಂಬಂತೆ ಸಕಲ ವಿಬುಧೊತ್ತಮರಲಿ ನಮ್ರತೆಯು,ಸುಖತೀರ್ಥರಲ್ಲಿ ಮುಖ್ಯಗುರುಭಾವನೆ(ಜೀವೋತ್ತಮ ತಿಳುವಳಿಕೆ ಸಹಿತ ಗುರು ಭಾವನೆ) ಮುಕುತಿ ಪ್ರದಾಯಕನಾದ ಶ್ರೀಕೃಷ್ಣನಲ್ಲಿ ನಿರ್ಮಲವಾದ ಭಕ್ತಿ ಇಷ್ಟು ಶ್ರೀಕೃಷ್ಣನಲ್ಲಿ ಬೇಡಲೇಬೇಕಾದ ವರಗಳಾಗಿವೆ.ರಾಜಸ,ತಾಮಸ ಗುಣಗಳು ಹೆಚ್ಚಿರುವ ನಾವು ಭಗವಂತನನ್ನು ಒಲಿಸಿಕೊಳ್ಳುವುದು ಕಷ್ಟ ಅದಕ್ಕೂ ವ್ಯಾಸರಾಜರು ನಮ್ಮಂಥವರನ್ನು ಗಮನದಲ್ಲಿಟ್ಟುಕೊಂಡು ಪ್ರಾರ್ಥನೆಯನ್ನು ಬರೆದುಕೊಟ್ಟಿದ್ದಾರೆ.(ಈ ಪ್ರಾರ್ಥನೆ ಪರಾರ್ಥ ಪ್ರಾರ್ಥನೆ ವ್ಯಾಸರಾಜರಿಗೆ ಅನ್ವಯಿಸಬಾರದು?)
‘ನಾ ರಾಜಸ ಬುದ್ದಿಯವನಾದರೆ ನೀನು ಅಮೃತರೂಪವಾದ ಕಾರುಣ್ಯವನ್ನು ಹರಿಸಿದರೆ ರಾಜಸ ಬುದ್ಧಿ ಹೋಗದೆ? ೨)ನಾನು ತಾಮಸ ಬುದ್ಧಿಯವನಾದರೆ,ನಿನ್ನ ದಿವ್ಯತೇಜೋವಿಗ್ರಹ ಪ್ರತ್ಯಕ್ಷವಾದರೆ ತಮಸ್ಸು ನಿನ್ನ ಪ್ರಕಾಶಕ್ಕೆ ಹೆದರೋಡದೆ? ನಾನು ಕಠಿಣನೆಂತಾದರೆ ಶಿಲೆಯನ್ನು ಸ್ತ್ರೀ ಮಾಡಿದ ನಿನ್ನ ಪಾದಗಳು ನನ್ನ ಕಠಿಣತ್ವವನ್ನು ಹೋಗಲಾಡಿಸದೆ? ಎಂದೆಲ್ಲಾ ಭಗವಂತನಲ್ಲಿ ನಾವು ಈಶ-ದಾಸ ಭಾವನೆಯ ಭಕ್ತಿ ಹೇಗೆ ಮಾಡಬೇಕು ಎಂಬುದನ್ನು ತೋರಿಕೊಟ್ಟಿದ್ದಾರೆ.

ವ್ಯಾಸರಾಜರು ನಮಗೂ ಆ ಭಗವಂತನನ್ನು ತೋರಿಸಲಿ ಎಂದು ಪ್ರಾರ್ಥಿಸುತ್ತಾ ವಿಮರಿಸುತ್ತೇನೆ.

Srinidhi Uttanur Kulkarni
Srinidhi Uttanur Kulkarni
Srinidhi Uttanoor works as a lecturer in a private engineering college in Bangalore. This scholar, having various books on Madhva philosophy is a bhakta of Rayaru and shishya of SRS Mutt.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: