ಶ್ರೀ ವ್ಯಾಸರಾಜಗುರುಸಾರ್ವಭೌಮರ ಉಪಾಸ್ಯ ಮೂರ್ತಿ ನೀಲಾದೇವಿ ಕರಾರ್ಚಿತ ಶ್ರೀ ಮೂಲಗೋಪಾಲಕೃಷ್ಣದೇವರು.ವ್ಠಾಸರಾಜರ ಅಂಕಿತನಾಮ ಶ್ರೀಕೃಷ್ಣ. ವ್ಯಾಸರಾಜರು ಬಾಹ್ಲೀಕರಾಜರಾಗಿದ್ದಾಗ ಕೃಷ್ಣನನ್ನು ಹತ್ತಿರದಿಂದ ಕಂಡವರು.ವ್ಯಾಸರಾಜರು-ರಾಘವೇಂದ್ರರು ಎರಡು ಅವತಾರಗಳಲ್ಲೂ ಸಂತಾನಗೋಪಾಲಕೃಷ್ಣನನ್ನು ಅರ್ಚಿಸಿದವರು.ಶ್ರೀ ವ್ಯಾಸರಾಜರು ತಮ್ಮ ಅನೇಕ ಪದಗಳಲ್ಲಿ ಕೃಷ್ಣ ಮಹಿಮೆಗಳನ್ನು ಸಾರಿದ್ದಾರೆ.ಕೃಷ್ಣ ಉಪದೇಶಿಸಿದ ಲೋಕೋತ್ತರ ಗ್ರಂಥ ಭಗವದ್ಗೀತೆಯನ್ನು ಕನ್ನಡೀಕರಿಸಿ ಉಪಕರಿಸಿದ್ದಾರೆ.ನಿರ್ಮಲವಾದ ಭಕ್ತಿಯಿಂದ ಕೂಡಿದ ಮಧ್ವರಾಯರ ಮಾನಸವೆಂಬ ಕಮಲದಲ್ಲಿ ಸಂತತ ನೆಲಸಿರುವ ಕಂಸಧ್ವಂಸಿಯಾದ ಕೃಷ್ಣಹಂಸನೇ ನಿನ್ನನ್ನು ಹಗಲಿರಳು ಸೇವಿಸುತ್ತೇನೆ ಎಂದು ಮಾಯಾವಾದಖಂಡನ ಮಂದಾರಮಂಜರಿಯಲ್ಲಿ ಸ್ತುತಿಸಿದ್ದಾರೆ.ತಾತ್ಟರ್ಯ ಚಂದ್ರಿಕಾ ಗ್ರಂಥದ ಮಂಗಲಾಚರಣೆಯಲ್ಲಿ ಶಮಯನ್ ಭವ ಸಂತಾಪಂ ರಮಯನ್ ಸಾಧುಚಾತಕಾನ್!ಕೃಷ್ಣಮೇಘ ಕೃಪಾದೃಷ್ಟಿಃ ವೃಷ್ಟ್ವಾ ಪುಷ್ಣಾತು ಮಾಮಪಿ ಸೂರ್ಯನ ತಾಪದಿಂದ ಚಾತಕಪಕ್ಷಿಗಳು ಕಂಗೆಡುತ್ತವೆ. ಅದರಂತೆ. ಸಂಸಾರ ತಾಪದಿಂದ ನಾವು ಕಂಗೆಟ್ಟಿದ್ದೇವೆ.ಎಲ್ಲೆ ಕೃಷ್ಣನೇ,ನಮ್ಮನ್ನು ಸಂತೋಷಪಡಿಸು.ಕಾರ್ಮೋಡವು ಮಳೆಯನ್ನು ಸುರಿಸಿಜಚಾತಕಗಳಿಗೆ ಸಂತೋಷ ನೀಡುವಂತೆ ಜ್ಞಾನಭಕ್ತ್ವ್ಯಾದಿಗಳ ಮಳೆಯನ್ನು ಸುರಿಸಿ ನೀನು
ನಮ್ಮನ್ನು ಪುಷ್ಟೀಕರಿಸು ಎಂದು ಪ್ರಾರ್ಥಿಸಿದ್ದಾರೆ.ಶ್ರೀ ಕೃಷ್ಣ ಮಂಗಲಾಷ್ಟಕವೆಂಬ ಪ್ರತ್ಯೇಕ ಕೃತಿಯಲ್ಲೂ ಶ್ರೀ ಕೃಷ್ಣನನ್ನು ಸುಂದರವಾಗಿ ಸ್ತುತಿಸಿದ್ದಾರೆ
ನಾಮಸ್ಮರಣೆಯ ಮಹತ್ವ
ಕಲೌ ಕೃಷ್ಣಸ್ಯ ಕೀರ್ತನಂ ಎಂಬಂತೆ, ಕೃಷ್ಣಾ ಕೃಷ್ಣಾ ಕೃಷ್ಣಾ ಎಂದು ಮೂರು ಬಾರಿ ನೆನೆದರೆ ಸಂತುಷ್ಟನಾಗಿ ಮುಕುತಿಕೊಟ್ಟು ಅನುಗ್ರಹಿಸುವ ದೈವನೇ ಭಗವಂತ ಕೃಷ್ಣನಾಗಿದ್ದಾನೆ ಎನ್ನುತ್ತಾರೆ.ಶ್ರೀ ಕೃಷ್ಣ ಸ್ಮರಣೆಯ ಫಲವನ್ನು ವಿವರಿಸುತ್ತಾರೆ.೧)ಶ್ರೀಕಮಲನಾಭನ ಚಿನ್ಹೆಯನ್ನು(ಶಂಖ ಚಕ್ರ) ಧರಿಸಿ ಕೃಷ್ಣನನ್ನು ನೆನೆದರೆ ಯಮ ಭಟರು ಅಂಜುವರು-ಪಾಪಗಳನ್ನು ಕರ್ಷಣ ಮಾಡಿದ ಮೇಲೆ ಜೀವಿಗಳ ಹತ್ತಿರ ಯಮಭಟರ ಸುಳಿವೇ ಇರುವುದಿಲ್ಲ ಇದಕ್ಕೆ ಅಜಾಮಿಲನೇ ದೃಷ್ಟಾಂತ.೨)ಶ್ರೀ ಕೃಷ್ಣನಾ ನಿರಾಕಾರವಸ್ತುವಲ್ಲ ಮಕರಕುಂಡಲಧರನಾಗಿದ್ದಾನೆ ಎನ್ನುತ್ತಾರೆ. ಅವನು ಜೀವಭಿನ್ನನಾಗಿ ಅಲ್ಪನಾದ ಜೀವಿಗೆ ಮೋಕ್ಷ ಕೊಡುವ ಹೆದ್ದೈವನಾಗಿದಾನೆ,ಮೋಕ್ಷ ದಲ್ಲೂ ಮುಕ್ತರಿಗೆ ಆಶ್ರಯಪ್ರದನಾಗಿದ್ದಾನೆ.೩)ಹೀಗೆ ಯಾವುದೇ ವರ್ಣಾಶ್ರಮಧರ್ಮದಲ್ಲಿದ್ದರೂ ಮಧ್ವಮತಾನುಸಾರಿಯಾಗಿ ಕೃಷ್ಣನನ್ನು ನೆನೆದಾಗ ಖಂಡಿತವಾಗಿ ಭಗವಂತ ತುಷ್ಟನಾಗಿ ಮೋಕ್ಷವನ್ನು ಅನುಗ್ರಹಿಸುತ್ತಾನೆ. ಎಂಬ ಅರ್ಥವನ್ನು ವ್ಯಾಸರಾಜರು ಹೇಳಿರಬಹುದು.ಹಾಗಾದರ ಕೃಷ್ಣಸ್ಮರಣೆ ಮಾಡಿದವರೆಲ್ಲ ಮೋಕ್ಷಕ್ಕೆ ಹೋಗುತ್ತಾರೆಯೇ ಎಂದರೆ? ಸ್ಮರಣೆ ಸಂತತವಾಗಿರಬೇಕು,ನಿರ್ಮಲನಿರತಿಶಯ ಭಕ್ತಿಯಿಂದ ಕೂಡಿರಬೇಕು.
ಭಾಗವತ ಸಾರೋದ್ಧರಾದಲ್ಲಿ ಹೇಳಿದಂತೆ ಜನ್ಮಾಂತರದಲ್ಲಿ ಮಹಾತ್ಮರ ಸೇವೆ ಮಾಡಿದ್ದರೆ,ಭಾಗವತ ಧರ್ಮಾನುಷ್ಠಾನ ಮಾಡಿದ್ದರೆ ಭಗವಂತ ತನ್ನ ನಾಮಸ್ಮರಣೆಯನ್ನು ಅನುಗ್ರಹಿಸುತ್ತಾನೆ.ಅದನ್ನೇ ವ್ಯಾಸರಾಜರು ಸುಮ್ಮಾನದಿ ಸಿರಿಕೃಷ್ಣ ತನ್ನ ಲೋಕ ಕೊಡುವನೋ? ಎಂದು ಪ್ರಶ್ನೆ ಮಾಡಿಕೊಂಡು ಉತ್ತರವನ್ನು ಹೇಳಿದ್ದಾರೆ,ಮಧ್ವಮತಾನುಸಾರಿಯಾಗಿ ಶ್ರೀಕೃಷ್ಣನನ್ನು ಸಂತತ ನೆನೆದರೆ ಕೊಡುವನು ಎಂದಿದ್ದಾರೆ.
to be continued… Part 2
2 Comments
Good information about Tatvavada of Sri Madhwcharya
Good thoughts