ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಿಕೊಳ್ಳಬೇಡಿ ಎಂದು ದಾಸರು ಮನುಷ್ಯನಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಬೇರೆ ಪ್ರಾಣಿಗಳಾಗಿ ಹುಟ್ಟಿದರೆ ವಿವೇಕ ಜ್ಞಾನ ಇರುವುದಿಲ್ಲ ಮನುಷ್ಯನಿಗೆ ವಿವೇಕ ಜ್ಞಾನವಿದೆ. ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯುವ ಜ್ಞಾನವಿದೆ. ಮನುಷ್ಯನಿಗೆ ಜೀವನ ಮಾಡುವುದನನ್ನೂ ಒಂದು ಕಲೆಯೆಂದು ಹೇಳಿಕೊಡಬೇಕಾದ ಪರಿಸ್ಥಿತಿ ಬಂದಿದೆ. ಜೀವನ ಎಂಬ ಪದದಲ್ಲಿ ವನ ಎಂಬುದನ್ನು ಗಮನಿಸಿ ವನ ಎಂದರೆ ಕಾಡು ದುರ್ಜನ ಸಂಗ ಮಾಡಿದರೆ ಜೀ’ವನ ‘ ಆಗುತ್ತದೆ. ವನ ಎಂದರೆ ಸಜ್ಜನ ಸಂಗ ಎಂತಲೂ ಅರ್ಥವಿದೆ ಜೀ’ವನ ‘ ಎಂಬುದು ಸಜ್ಜನ ಸಂಗದಿಂದ ಮಾತ್ರ ಅರ್ಥಪೂರ್ಣವಾಗಲು ಸಾಧ್ಯ.
ವಾಲಿ ರಾವಣ ಸ್ನೇಹ ಮಾಡಿ ಬಿದ್ದ
ಸುಗ್ರೀವ ಹನುಮಂತನ ಸಂಗ ಮಾಡಿ ಗೆದ್ದ
ಕರ್ಣ ದುರ್ಯೋಧನ ಸಂಗ ಮಾಡಿ ಬಿದ್ದ
ಅರ್ಜುನ ಭೀಮನ ಸಂಗ ಮಾಡಿ ಗೆದ್ದ
ಆದ್ದರಿಂದ ಮನುಷ್ಯ ಸಜ್ಜನ ಸಂಗ ಮಾಡಿ ಗೆಲ್ಲುವ ಕೆಲಸ ನಡೆಯಬೇಕಿದೆ.
ನೀವೇ ನಿರ್ಧರಿಸಿ ಸೋಲೋ? ಗೆಲುವೋ?