SRSMATHA, Mantralayam
MadhwaPurandarotsava - Day-4 @ Mantralayam
ಮಧ್ವ ಪುರಂದರೋತ್ಸವ : ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಜರುಗುತ್ತಿರುವ ಮಧ್ವಪುರಂದರೋತ್ಸವ ಕಾರ್ಯಕ್ರಕ್ಕೆ ಇಂದು ಬೆಳಿಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು (ಕಿರಿಯ ಪಟ್ಟ ) ಶ್ರೀಮಠಕ್ಕೆ ಆಗಮಿಸಿದರು. ಸಂಸ್ಥಾನ ಮರ್ಯಾದೆಗಳೊಂದಿಗೆ ಪೂಜ್ಯ ಗುರುಗಳನ್ನು ಬರಮಾಡಿಕೊಳ್ಳಲಾಯಿತು. ವಿದ್ವಾಂಸರಿಂದ ಉಪನ್ಯಾಸ ಹಾಗು ಸ್ವಾಮಿಗಳವರಿಂದ ಅನುಗ್ರಹ ಸಂದೇಶ ನಡೆಯಿತು . ಸಾಯಂಕಾಲ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಶ್ರೀಕ್ಷೇತ್ರಕ್ಕೆ ಆಗಮಿಸಿದರು. ಸಾಂಪ್ರದಾಯಿಕ ಮರ್ಯಾದೆಗಳೊಂದಿಗೆ ಪೂಜ್ಯ ಶ್ರೀಶ್ರೀ ಮಂತ್ರಾಲಯ ಮಠಾಧೀಶರು ಶ್ರೀಯವರನ್ನು ಬರಮಾಡಿಕೊಂಡರು. ಐತಿಹಾಸಿಕ ಪಂಚಮ ಪರ್ಯಾಯ ಸಂಪೂರ್ಣವಾದ ಕೂಡಲೇ ಶ್ರೀಗುರುರಾಜರ ದರ್ಶನಾರ್ಥ ಉಭಯ ಪೇಜಾವರ ಶ್ರೀಪಾದಂಗಳವರು ರಾಯರ ಸನ್ನಿಧಿಗೆ ಆಗಮಿಸಿದ್ದು ಭಕ್ತರ ಹರ್ಷಕ್ಕೆ ಕಾರಣವಾಯಿತು. ಮಹಾಮಹೋಪಾಧ್ಯಾಯ ಪಂಡಿತಕೇಸರಿ ರಾಜಾ . ಎಸ್ .ಗಿರಿಯಾಚಾರ್ಯರು ಸಭೆಯನ್ನುದ್ದೇಶಿಸಿ ಪ್ರವಚನ ಮಾಡಿದರು. ನಂತರದಲ್ಲಿ ಶ್ರೀ ಪೇಜಾವರ ಮಠಾಧೀಶರು ಹಾಗೂ ಶ್ರೀಮನ್ ಮಂತ್ರಾಲಯ ಮಠಾಧೀಶರು ಅನುಗ್ರಹ ಸಂದೇಶ ನೀಡಿದರು
<-
X