SRSMATHA, Mantralayam
5th Mahasamaradhana of Shri Suyateendra Teertha Swamiji - Poorvaradhana
ಶ್ರೀ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರ ಮಹಾಸಮಾರಾಧನಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಪೂರ್ವಾರಾಧನೆಯ ನಿಮಿತ್ತವಾಗಿ ಶ್ರೀಶ್ರೀಗಳವರ ಮೂಲವೃಂದಾವನ ಸನ್ನಿಧಿಗೆ ವಿಶೇಷ ಪಂಚಾಮೃತ ಅಭಿಷೇಕ ನಡೆಯಿತು. ಶ್ರೀ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅನುಗ್ರಹಾಶೀರ್ವಾದದಿಂದ ಆಯೋಜಿತವಾದ ಋಕ್ಸಂಹಿತಾ ಯಾಗವು ಶ್ರೀಮಠದ ಪ್ರಾಂಗಣದಲ್ಲಿ ಆರಂಭವಾಯಿತು. ನೂರಾರು ಜನ ಶ್ರೀಮಠದ ವೇದ ವಿದ್ವಾಂಸರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವರು. ಇದಲ್ಲದೇ ಶ್ರೀಮಠದ ಯಾಗಮಂಟಪದಲ್ಲಿ ನಾಡಿನ ಖ್ಯಾತ ವಿದ್ವಾಂಸರಿಂದ ಪ್ರವಚನ ಹಾಗೂ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
<-
X