SRSMATHA, Mantralayam
Davanagere Purapravesha
ಶ್ರೀ ಶ್ರೀ ೧೦೦೮ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ದಾವಣಗೆರೆ ಪ್ರಪ್ರಥಮ ಪುರಪ್ರವೇಶ ಕಾರ್ಯಕ್ರಮ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಪುನಃಪ್ರತಿಷ್ಠಾಪನಾ ಮಹೋತ್ಸವ…ದಿನಾಂಕ ೧೮:೨:೨೦೧೭ರಂದುದಾವಣಗೆರೆ ಹದಡಿ ರಸ್ತೆಯಲ್ಲಿರುವ ಜಿಲ್ಲಾ ಕ್ರೀಡಾಂಗಣದಿಂದ ವೇದ,ವಾದ್ಯ,ಭಜನೆ ಮೊದಲಾದ ವೈಭವಗಳೊಂದಿಗೆಶ್ರೀ ಮನ್ಮೂಲರಾಮಚಂದ್ರದೇವರ ಸಹಿತ ಶ್ರೀಪಾದಂಗಳವರನ್ನು ಗಜರಾಜನ ಮೇಲೆ ಭವ್ಯ ಮೇರವಣಿಗೆ ಮೂಲಕ ಕೆ.ಬಿ.ಬಡಾವಣೆಯ ಶ್ರೀ ರಾಘವೇಂದ್ರಸ್ವಾಮಿಗಳ ಮಠಕ್ಕೆ ಬರಮಾಡಿಕೋಳ್ಳಲಾಯಿತು..ನಂತರ ಶ್ರೀಗಳಿಂದ ಕಾರ್ಯಕ್ರಮದ ಉದ್ಘಾಟನೆ,ಪಂಡಿತರ ಉಪನ್ಯಾಸ,ಗಣ್ಯರ ಭಾಷಣ,ಶ್ರೀಗಳಿಗೆ ಸನ್ಮಾನ,ಶ್ರೀಗಳಿಂದ ಅನುಗ್ರಹ ಆಶೀರ್ವಚನ,ಶ್ರೀಗಳವರಿಗೆ ತುಲಾಭಾರ ಹಾಗೂಶ್ರೀ ಪೂರ್ಣಬೋಧ ಪ್ರತಿಷ್ಠಾನದ ಉದ್ಘಾಟನೆ ಕಾರ್ಯಕ್ರಮವು ವೈಭವದಿಂದ ನೆರವೆರಿತು..ದಿನಾಂಕ:೧೯-೨-೨೦೧೭ ರಂದು ಪ್ರಾತಃಕಾಲ ಶ್ರೀಮಠದಲ್ಲಿ ಶ್ರೀಪಾದರಿಗೆ ಸಾವಿರಾರು ಭಕ್ತರಿಂದ ಪಾದಪೂಜೆ ಹಾಗೂ ಶ್ರೀಪಾದರಿಂದ ಸಾವಿರಾರು ಜನ ಶ್ರೀಮಠದ ಶಿಷ್ಯರಿಗೆ ತಪ್ತಮುದ್ರಾಧಾರಣೆ ನಡೆಯಿತು..ನಂತರ ಶ್ರೀ ರಾಘವೇಂದ್ರಸ್ವಾಮಿಗಳ ಬೃಂದಾವನ ಪುನಃಪ್ರತಿಷ್ಠಾಪನಾ ಹಾಗೂ ಪಂಚಾಮೃತ ಅಭಿಷೇಕ ,ವಿದ್ಯಾರ್ಥಿಗಳಿಗೆ ಶ್ರೀಮನ್ಯಾಯಸಯಧಾ ಪಾಠ,ಶ್ರೀ ಮನ್ಮೂಲರಾಮಚಂದ್ರ ದೇವರ ಸಂಸ್ಥಾನ ಪೂಜೆ,ತೀರ್ಥ ಪ್ರಸಾದ ನೆರವೆರಿತು.ಶ್ರೀಗಳವರು ಇದೇ ಸಂದರ್ಭದಲ್ಲಿ ಬ್ರಾಹ್ಮಣ ಯುವವೇದಿಕೆಯ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟನೆ ಮಾಡಿದರು,ದಾವಣಗೆರೆಯ ಗೋ ಶಾಲೆಗೆ ಭೇಟಿಕೊಟ್ಟು ಗೋ ಸೇವೆಯ ಮಹತ್ವದ ಕುರಿತು ಪ್ರವಚನ ನಡೆಯಿತು.ನಂತರ ವಿಕಲಾಂಗಚೇತನರ ಶಾಲೆಗೆ ಭೇಟಿಕೊಟ್ಟುಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಆಶೀರ್ವದಿಸಿ ಅನುಗ್ರಹಿಸಿದರು..
<-
X