SRSMATHA, Mantralayam
5th Mahasamaradhana of Shri Suyateendra Teertha Swamiji - Madhyaradhana
ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರ ಮಧ್ಯಾರಾಧನಾ ಪ್ರಯುಕ್ತವಾಗಿ ಶ್ರೀಮಠದಲ್ಲಿ ಶ್ರಿ ಸುಯತೀಂದ್ರ ತೀರ್ಥರ ಮೂಲಬೃಂದಾವನಕ್ಕೆ ವಿಶೇಷ ಪಂಚಾಮೃತಾಭಿಷೇಕ ಮತ್ತು ಪ್ರಾಕಾರದಲ್ಲಿ ಭವ್ಯ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಅನ್ನಪೂರ್ಣ ಭೋಜನಶಾಲೆ ಯ ಮುಂಭಾಗದಲ್ಲಿರುವ ಸ್ಥಲದಲ್ಲಿ ನೂತನವಾಗಿ ನಿರ್ಮಿತವಾದ "ಶ್ರೀ ಸುಜ್ಞಾನೇಂದ್ರ ನಿಲಯ" - ನಿರೀಕ್ಷಣಾ ಮಂದಿರ ಹಾಗೂ ಸುಸಜ್ಜಿತ ವಸತಿ ಗೃಹ " ದ ಲೋಕಾರ್ಪಣೆಯು ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತ ದಿಂದ ನೆರವೇರಿತು. ಎರಡು ದಿನಗಳಿಂದ ವಿಶೇಷವಾಗಿ ಜರುಗಿದ ಋಕ್ ಸಂಹಿತಾ ಯಾಗದ ಪೂರ್ಣಾಹುತಿ ಕಾರ್ಯಕ್ರಮವು ಜರುಗಿತು. ಪೂಜ್ಯ ಶ್ರೀಪಾದಂಗಳವರು ಪೂರ್ಣಾಹುತಿಯ ನಂತರದಲ್ಲಿ ಅನುಗ್ರಹ ಸಂದೇಶ ನೀಡಿದರು. ನಂತರದಲ್ಲಿ ಚತುರ್ಯುಗಮೂರ್ತಿ ಶ್ರೀ ಮೂಲರಾಮದೇವರ ಸಂಸ್ಥಾನ ಪೂಜೆ - ಹಸ್ತೋದಕ - ಅಲಂಕಾರ - ಅನ್ನಸಂತರ್ಪಣಾ ಕಾರ್ಯಕ್ರಮಗಳು ನಡೆದವು.
<-
X