SRSMATHA, Mantralayam
Visit to NR Colony Banglore - 26.05.2023
ಬೆಂಗಳೂರಿನಲ್ಲಿ ಇಂದು ಎನ್ ಆರ್ ಕಾಲೋನಿಯಲ್ಲಿ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸುವರ್ಣ ಸಂಭ್ರಮ ಹಾಗೂ ಸುವರ್ಣ ಕವಚದ ಸಮರ್ಪಣ ಕಾರ್ಯಕ್ರಮವು ನೆರವೇರಿತು ಈ ಸಂದರ್ಭದಲ್ಲಿ ಜಗದ್ಗುರು ಶ್ರೀಮನ್ಮದ್ವಾಚಾರ್ಯ  ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಮಂತ್ರಾಲಯದ ಹಾಗೂ ಸೋಸಲೆ ಶ್ರೀ ವ್ಯಾಸರಾಜ ಮಠದ ಭಯ ಶ್ರೀಪಾದಂಗಳವರು ಉಪಸ್ಥಿತರಿದ್ದು ಎಲ್ಲರನ್ನೂ ಹರಿಸಿದರು ಈ ಸಂದರ್ಭದಲ್ಲಿ ಅಲ್ಲಿಗೆ ಹತ್ತಿರದಲ್ಲಿರುವ ನೆಟ್ಕಾಲಪ್ಪ ಸರ್ಕಲ್ ನಿಂದ ಶೋಭಾ ಯಾತ್ರೆಯನ್ನು ನೆರವೇರಿಸಲಾಯಿತು ನಂತರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉಬಯಸಿಪಾದಂಗಳವರು ಪರಸ್ಪರ ಮಠಗಳಲ್ಲಿರುವ ಸ್ನೇಹ ಸೌಹಾರ್ದತೆಯ ಬಗ್ಗೆ ಅನಂತಕಾಲದಿಂದ ನಡೆದ ಪರಸ್ಪರ ವಿದ್ಯಾ ವಿನಿಮಯ ಸ್ನೇಹ ಹಾಗೂ ಅಭಿಮಾನಗಳ ವಿನಿಮಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಉದಾಹರಣೆಗಳ ಸಹಿತವಾಗಿ ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲಿ ಮಂತ್ರಾಲಯ ಶ್ರೀಮಠದಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ನಡೆಯುವ ವಾಕ್ಯ ವಿಚಾರದ ಬಗ್ಗೆ ಮನ ಬಿಚ್ಚಿ ಮಾತನಾಡಿದ ವ್ಯಾಸರಾಜ ಮಠದ ಶ್ರೀಪಾದಂಗಳವರು ತಮ್ಮ ವಾಕ್ಯಾರ್ಥದ ಅನುಭವ ಮಂತ್ರಾಲಯ ಮಠದಿಂದಲೇ ಆರಂಭವಾಯಿತು ಎಂದು ಮಂತ್ರಾಲಯ ಮಠದಿಂದ ನಡೆಯುವ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಕ್ತವಾಗಿ ಹೇಳಿದರು ಇದೇ ಸಂದರ್ಭದಲ್ಲಿ ಅನುಗ್ರಹ  ಸಂದೇಶವನ್ನು ನೀಡಿದ ಮಂತ್ರಾಲಯ ಶ್ರೀ ಮಠದ ಶ್ರೀ ಸುಬುಧೇಂದ್ರ ತೀರ್ಥರು, ವ್ಯಾಸರಾಜ ಮಠಕ್ಕೂ ಮಂತ್ರಾಲಯ ಶ್ರೀ ಮಠಕ್ಕ್ಕಿರುವ ಅನುಚಾನವಾದ ಸಂಬಂಧವನ್ನು  ಹಾಗೂ ಹಿಂದೆ ವ್ಯಾಸರಾಜ ಮಠದಿಂದ ಒಂದು ಮುದ್ರೆ ಹಾಗೂ ಶ್ರೀ ರಾಯರ ಮಠದಿಂದ ಒಂದು ಮುದ್ರೆಯನ್ನು ಹಾಕುತ್ತಾ ಮುದ್ರಾ ಕಾರಣದ ಕ್ರಮವು ನಡೆದಿದ್ದು ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲಿ ನಡೆದ ಭಕ್ತ  ಸಮೂಹವು ಈಗಲೂ ಅದರಂತೆ ಮುದ್ರಾಧಾರಣ ನಡೆಯಲಿ ಎಂದರು ಹೀಗೆ ಆಶೀರ್ವಾದವನ್ನು ನೀಡಿ ಶ್ರೀಮಠದಿಂದ ನಿರ್ಮಾಣ ಮಾಡಿದ ಸುವರ್ಣ ಕವಚವನ್ನು ಶ್ರೀ ಗುರುರಾಜರಿಗೆ ಉದಯ ಶ್ರೀಪಾದರು ಸಮರ್ಪಿಸಿದರು ನಂತರ ಎರಡು ಸಂಸ್ಥಾನಗಳ ಪೂಜೆ  ನೆರವೇರಿ ಸಹಸ್ರಾರು  ಭಕ್ತರಿಗೆ ಪ್ರಸಾದ ವಿನಿಯೋಗವು ನಡೆಯಿತು
<-
X