SRSMATHA, Mantralayam
Visit to Bheemankatti
ದಿನಾಂಕ 15-02-2018, ರಂದು ಹರಿಧ್ಯಾನಪರರಾದ ಭೀಮನಕಟ್ಟೆ ಮಠಾಧೀಶರಾದ ಶ್ರೀರಘುಮಾನ್ಯ ತೀರ್ಥ ಶ್ರೀಪಾದಂಗಳವರ ಪರಲೋಕಯಾತ್ರಾ ವಿಚಾರ ತಿಳಿಯುತ್ತಿದ್ದಂತೆಯೇ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತೀವ್ರವೇ ಧಾವಿಸಿ ಕಿರಿಯ ಶ್ರೀಪಾದಂಗಳವರಿಗೆ ಸಾಂತ್ವನ ಹೇಳಿದರು.ಹಾಗೂ ಸಮಾರಾಧನೆ- ಬ್ರಾಹ್ಮಣ ಸಂತರ್ಪಣೆಗೆ ಬೇಕಾಗುವ ಯಾವತ್ತೂ ಪದಾರ್ಥ ಹಾಗೂ ವಸ್ತ್ರ- ರಜತಪಾತ್ರೆಗಳನ್ನು ನೀಡಿ, ಕಾರ್ಯಕ್ರಮದ ಏರ್ಪಾಟು ಮಾಡಿಸಿ, ಶ್ರೀಮಠವು ಯಾವಾಗಲೂ ತಮ್ಮೊಂದಿಗೆ ಇರುವುದೆಂದು ಅನುಗ್ರಹಿಸಿದರು.ಮಹಾಮಹೋಪಾಧ್ಯಾಯ ಶ್ರೀ ರಾಜಾ ಗಿರಿ ಆಚಾರ್ಯರು ಪೂಜ್ಯ ರಘಮಾನ್ಯತೀರ್ಥರ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರುಶ್ರೀ ಪುತ್ತಿಗೆ ಮಠಾಧೀಶರು ಕೂಡಾ ಉಪಸ್ಥಿತರಿದ್ದು..ಮಂತ್ರಾಲಯ ಮಠಾಧೀಶರು ಮಂತ್ರಾಲಯದಿಂದ ಬಂದ ಯಾವತ್ತೂ ಪದಾರ್ಥಗಳನ್ನು ಪುತ್ತಿಗೆ ಶ್ರೀಗಳ ಮೂಲಕ ಕೊಡಿಸಿ ಉಭಯ ಮಠಾಧೀಶರು ಭೀಮನಕಟ್ಟೆ ಮಠಾಧೀಶರ ಯಾವತ್ತೂ ಕಾರ್ಯಚಟುವಟಿಕೆಗಳಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
<-
X