Apamrutyu Parihariso Anila Deva

ಅಪಮೃತ್ಯು ಪರಿಹರಿಸೋ ಅನಿಲದೇವಾ | ಕೃಪಣ ವತ್ಸಲನೆ ಕಾಯ್ವರ ಕಾಣೆ ಜಗದೊಳಗೆ ॥ ಪ ॥ ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು । ಎನಗಿಲ್ಲವಾವ ಜನ್ಮದಲಿ । ಅನುದಿನವು ಎಮ್ಮನುದಾಸೀನ ಮಾಡುವುದು | ಅನುಚಿತವು ಜಗದಿ ಸಜ್ಜನ ಶಿಖಾಮಣೆಯೆ ॥ ೧ ॥ ಕರಣಮಾನಿಗಳು ನಿನ್ನ ಕಿಂಕರರು ಮೂಲೋಕ | ದೊರೆಯೆ ನಿನ್ನೊಳಗಿಪ್ಪ ಸರ್ವಕಾಲ ॥ ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ । ಗುರುವರಿಯ ನೀ ದಯಾಕರನೆಂದು ಮೊರೆ ಹೊಕ್ಕೆ ॥ ೨॥ ಭವರೋಗ ಮೋಚಕನೆ ಪವಮಾನರಾಯಾ ನಿಟ ನ್ನವರನು ನಾನು ಮಾಧವಪ್ರಿಯನೇ | ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ । ದಿವಿಜಗಣ ಮಧ್ಯದಲಿ ಪ್ರವರ ನೀನಹುದಯ್ಯ ॥ ೩ ॥ ಜ್ಞಾನಾಯು ರೂಪಕನು ನೀನಹುದೋ ವಾಣಿ ಪಂಟ ಜಾನನಾದ್ಯಮರರಿಗೆ ಪ್ರಾಣದೇವಾ । ದೀನವತ್ಸಲನೆಂದು ನಾ ನಿನ್ನ ಮೊರೆ ಹೊಕ್ಕೆ । ದಾನವಾರಣ್ಯ ಕೃಶಾನು ಸರ್ವದ ಎಮ್ಮ ॥೪( ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು | ಸಾಧಾರಣವು ಅಲ್ಲ ಸಾಧುಪ್ರಿಯಾ । ವೇದವಾದೋದಿತ ಜಗನ್ನಾಥವಿಠಲನ | ಪಾದ ಭಕುತಿಯನಿತ್ತು ಮೋದ ಕೊಡು ಸತತ ॥ ೫ ॥

Kannada

Suggest a correction

Help us care for this work. Include the passage or audio timestamp and your suggested change. A source reference is welcome.

Your message goes to the Matha’s editorial team. Your email is used only to reply to this report. Privacy policy

← Browse more stotrasRead & listen in the app ↗