Yarige yaruntu eravina samsara

ಯಾರಿಗೆ ಯಾರುಂಟು ಎರವಿನ ಸಂಸಾರ | ನೀರಮೇಲಣ ಗುಳ್ಳೆ ನಿಜವಲ್ಲ ಹರಿಯೆ ॥ ಪ ॥ ಬಾಂಯಾರಿತು ಎಂದು ಬಾವಿನೀರಿಗೆ ಪೋದೆ ॥ ಬಾವಿಲಿ ಜಲಬತ್ತಿ ಬರಿದಾಯ್ತು ಹರಿಯೆ ॥ ೧॥ ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ । ಮರ ಬಗ್ಗಿ ಶಿರದ ಮೇಲೊರಗಿತು ಹರಿಯೆ ॥ ೨॥ ಅಡವಿಯೊಳ್‌ ಮನೆಮಾಡಿ ಗಿಡಕೆ ತೊಟ್ಟಿಲಕಟ್ಟೆ । ತೊಟ್ಟಿಲಿನ ಶಿಶುವೆ ಮಾಯವಾಯಿತು ಹರಿಯೆ ॥ ೩ ॥ ತಂದೆ ಶ್ರೀಪುರಂದರ ವಿಠಲ ನಾರಾಯಣ | ನಾ ಸಾಯೊ ಹೊತ್ತಿಗೆ ನೀ ಕಾಯೋ ಹರಿಯೆ ॥ ೪॥

Kannada

Suggest a correction

Help us care for this work. Include the passage or audio timestamp and your suggested change. A source reference is welcome.

Your message goes to the Matha’s editorial team. Your email is used only to reply to this report. Privacy policy

← Browse more stotrasRead & listen in the app ↗