Dhanvantari Suladi

೧. ಧ್ರುವ ತಾಳ ಆಯುವೃದ್ಧಿ ಆಗುವುದು ಯಶಸ್ಸು ಬರುವುದು ಕಾಯ ನಿರ್ಮಲನ ಕಾರಣವಹುದು | ಮಾಯೆ ಹಿಂದಾಗುವುದು ನಾನಾ ರೋಗದ ಬೀಜ ಬೇಯಿಸಿ ಕಳೆವುದು ವೇಗದಿಂದ ನಾಯಿ ಮೊದಲಾದ ಕುತ್ಸಿತ ದೇಹ ನಿ- ಕಾಯವ ತೆತ್ತು ದುಷ್ಕರ್ಮದಿಂದ | ಕ್ರಿಯಮಾಣ ಸಂಚಿತ ಭರಿತವಾಗಿದ್ದ ದುಃಖ ಹೇಯ ಸಾಗರದೊಳು ಬಿದ್ದು ಬಳಲಿ ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ ಬಾಯಲಿ ವೈದ್ಯ ಮೂರುತಿ ಶ್ರೀ ಧನ್ವಂತರಿ | ರಾಯ ರಾಜೌಷಧ ನಿಯಾಮಕ ಕರ್ತು ಶ್ರೀಯರಸನೆ ಎಂದು ತುತಿಸಲಾಗಿ | ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ | ನೋಯಗೊಡದೆ ನಮ್ಮನ್ನು ಪಾಲಿಪಾ | ಧ್ಯೇಯಾ ದೇವಾದಿಗಳಿಗೆ ಧರ್ಮಜ್ಞಗುಣಸಾಂದ್ರ | ಶ್ರೇಯಸ್ಸು ಕೊಡುವನು ಭಜಕರಿಗೆ | ಮಾಯ-ಮಂತ್ರದಿಂದ ಜಗವೆಲ್ಲ ವ್ಯಾಪಿಸಿ | ನ್ಯಾಯವಂತನಾಗಿ ಚೇಷ್ಟೆ ಮಾಳ್ಪ | ವಾಯು ವಂದಿತ ನಿತ್ಯ ವಿಜಯ ವಿಟ್ಠಲರೇಯಾ | ಪ್ರಿಯನು ಕಾಣೋ ನಮಗೆ ಅನಾದಿ ರೋಗ ಕಳೆವಾ ||

೨, ಮಟ್ಟಿ ತಾಳ ಧನ್ವಂತರಿ ಸಿರಿ ಧನ್ವಂತರಿಯೆಂದು | ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ | ನಿನ್ನವ ನಿನ್ನವನೆಂದು ಘನತೆಯಲಿ ನೆನೆದ ಮನುಜ | ಘನ್ನ ಮೂರುತಿ ಒಲಿದು ನಲಿವ ಭು ವನದೊಳು ಧನ್ಯನು ಧನ್ಯನೆನ್ನಿ | ಚೆನ್ನ ಮೂರುತಿ ಸುಪ್ರಸನ್ನ ವಿಜಯ ವಿಠ- ಲನ್ನ ನಿತ್ಯನೆಂದು ಬಣ್ಣಿಸು ಬಹು ವಿಧದಿ ॥

೩. ತ್ರಿಪುಟ ತಾಳ ಶಶಿಕುಲೋತ್ಸ ದೀರ್ಫ್ಥತಮ ನಂದನ ದೇವ ದೇವಾ | ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ | ಶಶಿಮಂಡಲ ಸಂಸ್ಥಿತ ಕಲಶ ಪಾಣಿ | ಬಿಸಜಲೋಚನ ಆಶ್ವಿನೇಯ ವಂದ್ಯ | ಶಶಿಗರ್ಭ ಭೂರುಹಲತೆ ಪೊದೆ ರೋಗವ ತಾ ಓಡಿಸುವ | ಔಷಧಿ ತುಳಸಿ ಜನಕ ವಸುದೇವ | ಅಸುರ ನಿರ್ಜರತತಿ ನೆರೆದು ಗಿರಿಯ ತಂದು | ಮಿಸುಕದಲೆ ಮಹೋದಧಿ ಮಥಿಸಲಾಗಿ | ನಸು ನಗುತ ಪುಟ್ಟಿದೆ ಪೀಯೂಷ ಘಟ ಧರಿಸಿ | ಅಸಮ ದೈವವೆ ನಿನ್ನ ಮಹಿಮೆಗೆ ನಮೋ ನಮೋ | ಬಿಸಜ ಸಂಭವ ರುದ್ರ ಮೊದಲಾದ ದೇವತಾ ಖಷಿನಿಕರ ನಿನ್ನ ಕೊಂಡಾಡುವುದು | ದಶ ದಿಶದೊಳು ಮೆರೆವ ವಿಜಯ ವಿಟ್ಠಲ | ಭೀಷಣ ಅಸು ಇಂದ್ರಿಯಗಳ ರೋಗ ನಿವಾರಣ ॥

೪. ಆಟ ತಾಳ ಶರಣು ಶರಣು ಧನ್ವಂತರಿ ತಮಗುಣನಾಶ | ಶರಣು ಆರ್ತಜನ ಪರಿಪಾಲಕ ದೇವ | ತರುವೆ ಭವತಾಪ ತರಣ ದಿತಿಸುತ ಹರಣ ಮೋಹಕಲ್ಪ | ಪರಮ ಪೂರ್ಣ ಬ್ರಹ್ಮ ಬ್ರಹ್ಮ ಉದ್ಧಾರಕ | ಉರುಪರಾಕ್ರಮ ಉರಗಶಾಯಿ | ವರ ಕಿರೀಟ ಮಹಾಮಣಿ ಕುಂಡಲ ಕರ್ಣ | ಮಿರುಗುವ ಹಸ್ತ ಕಂಕಣ ಹಾರ ಪದಕ | ಹೀರ ಕಾಂಚಿ ಪೀತಾಂಬರ ಚರಣ ಭೂಪ | ಸಿರಿವತ್ಸಲಾಂಛನ ವಿಜಯ ವಿಟ್ಟಲ ಪ್ರಿಯ | ತರುಣ ಗಾತ್ರ ಜ್ಞಾನ ಮುದ್ರಾಂಕಿತ ಹಸ್ತ ॥

೫. ಆದಿ ತಾಳ ಏಳುವಾಗಲಿ ಮತ್ತೆ ತಿರುಗಿ ತಿರುಗುವಾಗಲಿ | ಬೀಳುವಾಗಲಿ ನಿಂತು ಕುಳ್ಳಿರುವಾಗಲಿ | ಬೀಳುವಾಗಲಿ ಮಾತು ಕೇಳುವಾಗಲಿ ಕರೆದು | ಹೇಳುವಾಗಲಿ ಹೋಗಿ ಸತ್ಕರ್ಮ ಮಾಡುವಾಗಲಿ | ಬಾಳುವಾಗಲಿ ಭೋಜನ ನಾನಾ ಷಡ್ರಸಾನ್ನಸ- ಮೈಳವಾಗಲಿ ಒಮ್ಮೆ ಪುತ್ರಾದಿಗಳೊಡನೆ | ಕೇಳಿ ಮಾಡಲಿ ಮನುಜ ಮರಿಯಾದೆ ತನ್ನಯ | ನಾಲಿಗೆ ಕೊನೆಯಲ್ಲಿ ಧನ್ವಂತರಿ ಎಂದು ಒಮ್ಮೆ ಕಾಲ ಕಾಲದಲ್ಲಿ ಸ್ಮರಿಸಿದರೆ ಆವಾಗ ವೇಳೆವೇಳೆಗೆ ಬಹುಭವಬೀಜ ಪರಿಹಾರ ನೀಲಮೇಖಶ್ಯಾ ವಿಜಯವಿಟ್ಠಲರೇಯ ಓಲಗ ಕೊಡುವನು ಮುಕ್ತರ ಸಂಗದಲ್ಲಿ ಧನ್ವಂತರೀ ಧನ್ವಂತರಿ ಎಂದು ಪ್ರಣವ ಪೂರ್ವಶದಿಂದ ವಂದಿಸಿ ನೆನೆಯಲು ವಿಜಯವಿಟ್ಠಲ ಒಲಿವ ॥

॥ ಶ್ರೀ ಕೃಷ್ಣಾರ್ಪಣಮಸ್ತು ॥

Kannada

Suggest a correction

Help us care for this work. Include the passage or audio timestamp and your suggested change. A source reference is welcome.

Your message goes to the Matha’s editorial team. Your email is used only to reply to this report. Privacy policy

← Browse more stotrasRead & listen in the app ↗