Dharmakke kai baaradee kaala

ಧರ್ಮಕ್ಕೆ ಕೈ ಬಾರದೀ ಕಾಲ । ಪಾಪ ಕರ್ಮಕ್ಕೆ ಮನಸೋಲೋದೀ ಕಲಿ ಕಾಲ ॥ ಪ ॥ ದಂಡದ್ರೋಹಕೆ ಉಂಟು । ಪುಂಡು ಪೋಕರಿಗುಂಟು | ಹೆಂಡತಿ ಮಕ್ಕಳಿಗಿಲ್ಲವೀ ಕಾಲ ॥ ದಿಂಡೇರಿಗುಂಟು ।! ಜಗಭಂಡರಿಗುಂಟು ಅಂಡಲೆವರಿಗಿಲ್ಲವೀ ಕಾಲ ॥ ೧೫ ಮತ್ತೆ ಸುಳ್ಳರಿಗುಂಟು । ನಿತ್ಯ ಹಾದರಕುಂಟು | ಉತ್ತಮರಿಗಿಲ್ಲವೀ ಕಾಲ ॥ ತೊತ್ತೇರಿಗುಂಟು । ತಾಟಕಿಗುಂಟು | ಹೆತ್ತತಾಯಿಗಿಲ್ಲವೀ ಕಾಲ ॥ ೨ ॥ ಹುಸಿ ದಿಟವಾಯಿತು । ರಸ ಕಸವಾಯಿತು । ಸೊಸೆ ಅತ್ತೆಯ ದಂಡಿಸೋದೀ ಕಾಲ ॥ ಬಿಸಜಾಕ್ಟ ಪುರಂದರವಿಠಲನ ಮನದಲ್ಲಿ । ಸ್ತುತಿಸುವವರಿಗಿಲ್ಲವೀ ಕಾಲ ॥ ೩ ॥

Kannada

Suggest a correction

Help us care for this work. Include the passage or audio timestamp and your suggested change. A source reference is welcome.

Your message goes to the Matha’s editorial team. Your email is used only to reply to this report. Privacy policy

← Browse more stotrasRead & listen in the app ↗