ಹಿಗ್ಗುವೆ ಯಾಕೋ *ಈ ದೇಹಕೆ | ಹಿಗ್ಗುವೆ ಯಾಕೋ ॥ ಪ ॥ ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವ | ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕೆ ॥ ಅಪ ॥ ಸತಿಪುರುಷರು ಕೂಡಿ ರತಿಕ್ರೀಡೆಗಳ ಮಾಡಿ | ಪತನವಾದಿಂದ್ರಿಯ । ಪ್ರತಿಮೆಯ ದೇಹಕ್ಕೆ ॥ ೧ ॥ ಆಗಭೋಗಗಳನ್ನು ಆಗು ಮಾಡುತಲಿದ್ದು | ರೋಗ ಬಂದರೆ ಬಿದ್ದು । ಹೋಗುವ ದೇಹಕ್ಕೆ ॥ ೨॥ ಪರರ ಸೇವೆಯ ಮಾಡಿ ನರಕ ಭಾಜನನಾಗಿ । ಮರಳಿ ಮರಳಿ ಬಿದ್ದು | ಉರುಳುವ ದೇಹಕ್ಕೆ ॥ ೩ ॥ ಸೋರುವದೊಂಬತ್ತು ದ್ವಾರದಿಂದಲಿ ಮಲ | ನೀರಿಲ್ಲದಿದ್ದರೆ । ನಾರುವ ದೇಹಕ್ಕೆ ॥ ೪ ॥ ಪುರಂದರ ವಿಠಲನ | ಚರಣ ಕಮಲಕ್ಕೆ ಎರಗದೆ । ತಿರುಗುವ ಗರುವದ ದೇಹಕ್ಕೆ ॥ ೫ ॥
Higguve yako ee dehakke
Kannada
Suggest a correction
Help us care for this work. Include the passage or audio timestamp and your suggested change. A source reference is welcome.